ಕಲ್ಬುರ್ಗಿ: ಎಲ್ಲ ವರ್ಗಕ್ಕೆ ಕೇಂದ್ರ ಸಂಪುಟದಲ್ಲಿ ಹೆಸರಿಗೆ ಮಾತ್ರ ಮಂತ್ರಿ ಸ್ಥಾನ ನೀಡಲಾಗಿದೆ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ.
ಕೇಂದ್ರದ ಸಂಪುಟದಲ್ಲಿ ಎಲ್ಲ ವರ್ಗದವರಿಗೆ ಪ್ರಾತಿನಿದ್ಯತೆ ನೀಡಲಾಗಿದೆ ಎಂದು ಹೇಳಲಾಗುತ್ತದೆ. ಆದರೆ ಅವರಿಗೆ ಅಧಿಕಾರ ಭಾಗ್ಯ ಕಲ್ಪಿಸಿಲ್ಲ ಎಂದು ವಾಗ್ದಾಳಿ ನಡೆಸಿದರು.
ರಾಜ್ಯಸಭೆ ಸದಸ್ಯ ಹಾಗೂ ರಾಜ್ಯಸಭೆ ವಿರೋಧ ಪಕ್ಷದ ನಾಯಕರಾದ ನಂತರ ಕಲಬುರಗಿಗೆ ಪ್ರಥಮ ಬಾರಿಗೆ ಆಗಮಿಸಿ ಮಾತನಾಡಿದ ಅವರು, ಕೇಂದ್ರದಲ್ಲಿ ಎಲ್ಲ ವರ್ಗಕ್ಕೆ ಸ್ಥಾನ ನೀಡಲಾಗಿದೆಯಾದರೂ ಅವರೆಲ್ಲಾ ಸಂಪುಟ ದರ್ಜೆಯ ಸಚಿವರಾಗದೇ ರಾಜ್ಯ ಸಚಿವರಾಗಿದ್ದಾರೆ. ಹೀಗಾಗಿ ಯಾವುದೇ ಅಧಿಕಾರ ನೀಡಿಲ್ಲ. ಕೇಂದ್ರದ ಸಚಿವರು ಎಂಬ ಹೆಸರು ಮಾತ್ರ ಹಾಕಿಕೊಳ್ಳಲು ಮಾತ್ರ ಸಿಮೀತ ಎನ್ನುವಂತಾಗಿದೆ. ಅತ್ತ ಉತ್ತರ ಪ್ರದೇಶದ ಸಂಪುಟದಲ್ಲೂ ಇದೇ ರೀತಿ ಆಗಿದೆ. ಹೀಗಾಗಿ ಮೋದಿ, ಯೋಗಿ ಇಬ್ಬರು ಬೇರೆಯವರಿಗೆ ಅಧಿಕಾರ ನೀಡಿಲ್ಲ ಎಂದು ಕಿಡಿಕಾರಿದ್ದಾರೆ.