ಅಸ್ಸಾಂ: ಭಾರತ್ ಜೋಡೋ ನ್ಯಾಯ ಯಾತ್ರೆ ವೇಳೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಎದುರಿಸಿರುವ ಭದ್ರತಾ ಲೋಪಗಳ ಬಗ್ಗೆ ಕಳವಳ ವ್ಯಕ್ತಪಡಿಸಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆದಿದ್ದಾರೆ.
ಖರ್ಗೆ ಮಂಗಳವಾರ ರಾತ್ರಿ ಬರೆದ ಪತ್ರವು ಕಾಂಗ್ರೆಸ್ ನಾಯಕನ ಸುರಕ್ಷತೆಯ ಬಗ್ಗೆ ಮೂಡಿರುವ ಕಳವಳವನ್ನು ಎತ್ತಿ ಹೇಳಿದೆ. ಜನವರಿ 22ರಂದು ನಾಗಾಂವ್ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರು ರಾಹುಲ್ ಗಾಂಧಿ ಬೆಂಗಾವಲು ಪಡೆಗೆ ಅಡ್ಡಿಪಡಿಸಿದರು ಎಂದು ಪತ್ರದಲ್ಲಿ ಬರೆದಿದ್ದಾರೆ.
ಅಸ್ಸಾಂ ಪೊಲೀಸರು ಮೂಕ ಪ್ರೇಕ್ಷಕರಾಗಿದ್ದಾರೆ ಮತ್ತು ಕೆಲವೊಮ್ಮೆ ಕಾರ್ಯಕರ್ತರ ಬೆಂಗಾವಲು ವಾಹನವನ್ನು ಪ್ರವೇಶಿಸಲು ಅವಕಾಶ ಮಾಡಿಕೊಟ್ಟಿದ್ದಾರೆ ಹೀಗಾಗಿ ರಾಹುಲ್ ಗಾಂಧಿ ಭದ್ರತೆಗೆ ಅಪಾಯವಿದೆ ಎಂದಿದ್ದಾರೆ.