ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆ

Prasthutha|

ನವದೆಹಲಿ: ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನದ ಚುನಾವಣೆಯ ಮತ ಎಣಿಕೆ ಇಂದು ನಡೆದಿದ್ದು, ಮಲ್ಲಿಕಾರ್ಜುನ ಖರ್ಗೆ ಜಯಭೇರಿ ಬಾರಿಸಿದ್ದಾರೆ. ಪ್ರತಿಸ್ಫರ್ಧಿ ಶಶಿ ತರೂರ್ ಸೋಲನುಭವಿಸಿದ್ದಾರೆ.

- Advertisement -

ಕಾಂಗ್ರೆಸ್ ಪಕ್ಷದ 137 ವರ್ಷಗಳ ಇತಿಹಾಸದಲ್ಲಿ ಆರನೇ ಬಾರಿ ಚುನಾವಣೆ ನಡೆದಿದೆ. ಹಾಗೆಯೇ 22 ವರ್ಷಗಳ ಬಳಿಕ ನೆಹರೂ-ಗಾಂಧಿ ಕುಟುಂಬದ ಹೊರಗಿನ ವ್ಯಕ್ತಿಗೆ ಅಧ್ಯಕ್ಷ ಸ್ಥಾನ ದೊರಕಿದೆ.

ಮಲ್ಲಿಕಾರ್ಜುನ ಖರ್ಗೆ ಅವರು 7897 ಮತ ಪಡೆದುಕೊಂಡರೆ, ಪ್ರತಿಸ್ಫರ್ಧಿ ಶಶಿ ತರೂರ್ 1072 ಮತ ಪಡೆದಿದ್ದಾರೆ.

- Advertisement -

ಈ ಹಿಂದೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್‌ ನಿಜಲಿಂಗಪ್ಪ ಕಾಂಗ್ರೆಸ್‌ನ ಅಧ್ಯಕ್ಷರಾಗಿದ್ದರು. ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಸ್ಥಾನ ಅಲಂಕರಿಸಲಿರುವ ಎರಡನೇ ಕನ್ನಡಿಗ ಎಂಬ ಮನ್ನಣೆಗೆ ಭಾಜನರಾಗಲಿದ್ದಾರೆ.


ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಶೇ 96ರಷ್ಟು ಮತದಾನವಾಗಿತ್ತು. 9,915 ಪ್ರತಿನಿಧಿಗಳ ಪೈಕಿ 9,500 ಪ್ರತಿನಿಧಿಗಳು ತಮ್ಮ ಹಕ್ಕು ಚಲಾಯಿಸಿದ್ದರು.

2019ರ ಲೋಕ ಸಭೆ ಚುನಾವಣೆಯ ಸೋಲಿನ ಬಳಿಕ ರಾಹುಲ್ ಗಾಂಧಿಯವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಂದಿನಿಂದ ಸೋನಿಯಾ ಗಾಂಧಿಯವರು ಮಧ್ಯಾವಧಿ ಅಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.  

ಕಳೆದ ಎರಡು ದಶಕಗಳಲ್ಲಿ ನೆಹರೂ ಕುಟುಂಬದಾಚೆಗಿನ ಮೊದಲ ಅಧ್ಯಕ್ಷರೂ ಆಗಿದ್ದಾರೆ ಖರ್ಗೆ. “ಇದು ದೊಡ್ಡ ಗೌರವ ಹಾಗೂ ಅತಿ ದೊಡ್ಡ ಜವಾಬ್ದಾರಿ . ನಾನು ಖರ್ಗೆಯವರಿಗೆ ಒಳ್ಳೆಯದಾಗಲಿ, ಯಶಸ್ಸು ಸಿಗಲಿ  ಎಂದು ಹಾರೈಸುತ್ತೇನೆ ಎಂದು ಸೋತ ಅಭ್ಯರ್ಥಿ ಶಶಿ ತರೂರ್ ಟ್ವೀಟ್ ಮಾಡಿದ್ದಾರೆ.  

ಖರ್ಗೆಯವರು ಸೋನಿಯಾ ಗಾಂಧಿಯವರ ಅನಧಿಕೃತ ಅಭ್ಯರ್ಥಿ ಆಗಿದ್ದುದರಿಂದ ಅವರ ಗೆಲುವಿನ ಬಗ್ಗೆ ಯಾರಿಗೂ ಸಂಶಯವಿರಲಿಲ್ಲ. 137 ವರ್ಷಗಳ ಕಾಂಗ್ರೆಸ್ ಇತಿಹಾಸದಲ್ಲಿ ಆರನೆಯ ಬಾರಿ ಅಧ್ಯಕ್ಷ ಗಾದಿಗೆ ಚುನಾವಣೆ ನಡೆದು ಆಯ್ಕೆ ಆಗಿದೆ.

ಅಕ್ಟೋಬರ್ 18ರಂದು ಮತದಾನ ನಡೆದಿದ್ದು 96 ಶೇಕಡಾ ಕಾಂಗ್ರೆಸ್ಸಿನ ಮತದಾರ ಪದಾಧಿಕಾರಿಗಳು ಮತ ಚಲಾಯಿಸಿದ್ದರು. 87 ಕಾಂಗ್ರೆಸ್ ಕಚೇರಿಗಳಲ್ಲಿ, 50 ಸಂಚಾರಿ ಕೇಂದ್ರಗಳಲ್ಲಿ ಮತದಾನ ನಡೆದವು ಎಂದು ಕಾಂಗ್ರೆಸ್ ಚುನಾವಣಾ ಪ್ರಾಧಿಕಾರದ ಮಧುಸೂದನ್ ಮಿಸ್ತ್ರಿ ಹೇಳಿದ್ದಾರೆ. 



Join Whatsapp