ಮಂಗಳೂರು: ಮಳಲಿ ಮಸೀದಿ ವಿಚಾರಕ್ಕೆ ಸಂಬಧಿಸಿದಂತೆ ನ್ಯಾಯಾಲಯವು ವಿಚಾರಣೆಯನ್ನು ನಾಳೆಗೆ ಮುಂದೂಡಿದೆ. ಇಂದು ಸುದೀರ್ಘ ವಿಚಾರಣೆ ನಡೆಸಿದ ಮೂರನೇ ಹೆಚ್ಚುವರಿ ಸಿವಿಲ್ ಕೋರ್ಟ್, ಉಳಿದ ವಿಚಾರಣೆಯನ್ನು ಶುಕ್ರವಾರಕ್ಕೆ ಮೂಂದೂಡಿದೆ.
ಈ ಹಿಂದಿನ ವಿಚಾರಣೆಯಲ್ಲಿ ಮಸೀದಿ ಪರ ವಕೀಲರಿಂದ ವಾದ ಆಲಿಸಿದ್ದ ಕೋರ್ಟ್, ಇಂದು ವಿಶ್ವ ಹಿಂದೂ ಪರಿಷತ್ ಪರ ವಕೀಲರಿಂದ ವಾದ ಆಲಿಸಿದೆ. ವಾದಕ್ಕೆ ಕೋರ್ಟ್ ಬಳಿ ಅವಕಾಶ ಕೋರಿದ್ದ ವಿಎಚ್’ಪಿ ಇಂದು ಮಧ್ಯಾಹ್ನ ವಾದ ಮಂಡನೆ ಮಾಡಿದೆ.
ವಿಎಚ್’ಪಿ ಪರವಾದ ಸುಧೀರ್ಘ ವಾದವನ್ನು ಆಲಿಸಿದ ನ್ಯಾಯಲಯವು ವಿಚಾರಣೆಯನ್ನು ನಾಳೆಗೆ ವಿಚಾರಣೆ ಮುಂದೂಡಿತು. ನಾಳೆ ಮತ್ತೆ ವಿಎಚ್ಪಿ ಪರ ವಕೀಲರಿಂದ ವಾದ ಮಂಡನೆ ನಡೆಯಲಿದೆ.