ಮಾಲೆಗಾಂವ್ ಸ್ಫೋಟಕವಿದ್ದ ಇಗ್ಗಾಲಿ ವಾಹನ ಬಿಜೆಪಿ ಸಂಸದೆ ಪ್ರಗ್ಯಾ ಸಿಂಗ್ ಠಾಕೂರರದ್ದು: ಫೊರೆನ್ಸಿಕ್ ತಜ್ಞರು

Prasthutha|

ಮುಂಬೈ: ಮಾಲೆಗಾಂವ್ ಸರಣಿ ಸ್ಫೋಟಕ್ಕೆ ಸಂಬಂಧಿಸಿದಂತೆ ಸ್ಫೋಟಕ ಇರಿಸಿದ್ದ ಎಲ್ಲೆಮ್ಮೆಲ್ ವೆಸ್ಪಾ ಸ್ಕೂಟರ್ ಭೋಪಾಲ್ ಸಂಸದೆ ಪ್ರಗ್ಯಾ ಸಿಂಗ್ ಠಾಕೂರರ ಹೆಸರಿನಲ್ಲಿ ನೋಂದಣಿಯಾಗಿದೆ ಎಂದು ಇಲ್ಲಿನ ಎನ್ ಐಎ ಕೋರ್ಟಿಗೆ ತನಿಖಾಧಿಕಾರಿಗಳು ತಿಳಿಸಿದ್ದಾರೆ.

- Advertisement -

ನಾಸಿಕ್ ಜಿಲ್ಲೆಯ ಮಾಲೆಗಾಂವ್ ಪಟ್ಟಣದಲ್ಲಿ 2008ರ ಸೆಪ್ಟೆಂಬರ್ 29ರಂದು ಮಸೀದಿಯೊಂದರ ಬಳಿ ನಿಲ್ಲಿಸಿದ್ದ ಬಾಂಬ್ ಇಟ್ಟಿದ್ದ ಸ್ಕೂಟರ್ ಸ್ಫೋಟಗೊಂಡು 6 ಮಂದಿ ಸಾವಿಗೀಡಾಗಿ, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

2008ರಲ್ಲೇ ಫೋರೆನ್ಸಿಕ್ ತಜ್ಞರು, ಸ್ಫೋಟ ಸ್ಥಳದಲ್ಲಿ ಮತ್ತು ಸ್ಕೂಟರಿನಲ್ಲಿ ಅಮೋನಿಯಂ ನೈಟ್ರೇಟ್ ಕಂಡು ಬಂದಿದ್ದು, ಅದು ಸ್ಫೋಟಕವಾಗಿ ಬಳಕೆಯಾಗಿತ್ತು ಎಂದು ಹೇಳಿದ್ದರು.

- Advertisement -

2008ರಲ್ಲಿ ಸ್ಫೋಟದ ಸ್ಥಳಕ್ಕೆ ಹೋದಾಗ, ಸ್ಕೂಟರ್ ಪೂರ್ಣ ತುಂಡು ತುಂಡಾಗಿದ್ದುದು ಕಂಡು ಬಂತು. ಸ್ಕೂಟರಿನ ಇಂಧನ ಟ್ಯಾಂಕ್, ಸೀಟು ಕವರ್, ಬೂಟ್ ಗಳು ಸ್ಫೋಟಿಸಿ ಛಿದ್ರ ಛಿದ್ರವಾಗಿ ಬಿದ್ದಿದ್ದವು. ಒಂದು ಹೋಂಡಾ ಯುನಿಕಾರ್ನ್ ಬೈಕ್, ಒಂದು ಸೈಕಲ್ ಕೂಡ ಹಾನಿಗೊಳಗಾಗಿತ್ತು.

ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅವಿನಾಶ್ ರಾಸಲರಿಗೆ ಈಗ ನಿವೃತ್ತರಾಗಿರುವ ಆಗಿನ ಫೊರೆನ್ಸಿಕ್ ತಜ್ಞರು ಈ ವಿವರವನ್ನು ನೀಡಿದ್ದಾರೆ.

ಪೊಲೀಸರು ರಾಸಾಯನಿಕ ವಿಶ್ಲೇಷಣೆಗೆ ನೀಡಿದ ವಸ್ತುಗಳು ಮತ್ತು ನಾನೇ ಸ್ಫೋಟದ ಸ್ಥಳಕ್ಕೆ ಹೋಗಿ ರಾಸಾಯನಿಕ ಸಂಗ್ರಹಿಸಿ ಮಾಡಿದ ವಿಶ್ಲೇಷಣೆಯ ಸಂತುಲಿತ ಸಾರವಿದು ಎಂದು ನಿವೃತ್ತ ಫೊರೆನ್ಸಿಕ್ ತಜ್ಞರು ತಿಳಿಸಿದ್ದಾರೆ.

ಮಾಲೆಗಾಂವ್ ನ ಬಿಕು ಚೌಕದ ಮಸೀದಿ ಬಳಿ ಬಾಂಬು ಇರಿಸಿದ ಸ್ಕೂಟರನ್ನು ಸ್ಫೋಟಕ್ಕೆ ನಿಲ್ಲಿಸಲಾಗಿತ್ತು ಎಂದು ಪ್ರಾಸಿಕ್ಯೂಶನ್ ವಾದಿಸಿದೆ. ಮಹಾರಾಷ್ಟ್ರ ಎಟಿಎಸ್ ಆರಂಭಿಕ ತನಿಖೆ ನಡೆಸಿದ ಈ ಮೊಕದ್ದಮೆಯನ್ನು ಅನಂತರ ಎನ್ ಐಎ ರಾಷ್ಟ್ರೀಯ ತನಿಖಾ ಏಜೆನ್ಸಿಗೆ ವಹಿಸಿ ಕೊಡಲಾಗಿದೆ.



Join Whatsapp