ಕುನೋ ಉದ್ಯಾನವನದಲ್ಲಿ ಮೃತಪಟ್ಟ ಗಂಡು ಚೀತಾ : ಕೇವಲ 4 ತಿಂಗಳಲ್ಲಿ 7 ಚೀತಾಗಳ ಸಾವು!

Prasthutha|

ಭೋಪಾಲ್: ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಇಂದು ಗಂಡು ಚೀತಾ ಸಾವಿಗೀಡಾಗಿದ್ದು, ನಾಲ್ಕು ತಿಂಗಳಲ್ಲಿ ಏಳು ಚೀತಾಗಳ ಸಾವು ಸಂಭವಿಸಿದೆ.

- Advertisement -

 ಮಂಗಳವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಚೀತಾದ ಕತ್ತಿನ ಮೇಲೆ ಗಾಯಗಳನ್ನು ಗಮನಿಸಿದ ಮೇಲ್ವಿಚಾರಣಾ ತಂಡವು ವೈದ್ಯರಿಗೆ ತಿಳಿಸಿದ್ದು, ಅವರು ಪ್ರಾಣಿಯನ್ನು ಪರೀಕ್ಷಿಸಿ ಗಾಯಗಳಿಗೆ ಚಿಕಿತ್ಸೆ ನೀಡಿದ್ದರು. “ಮಧ್ಯಾಹ್ನ 2 ಗಂಟೆ ಸುಮಾರಿಗೆ ಗಂಡು ಚೀತಾ ತೇಜಸ್ ಸಾವಿಗೀಡಾಗಿರುವುದು ಪತ್ತೆಯಾಗಿದೆ. ಆ ಗಾಯಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಮರಣೋತ್ತರ ಪರೀಕ್ಷೆಯ ನಂತರ ಸಾವಿನ ಕಾರಣವನ್ನು ಕಂಡುಹಿಡಿಯಬಹುದು” ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜೆಎಸ್ ಚೌಹಾಣ್ ಹೇಳಿದ್ದಾರೆ.

ಮಾರ್ಚ್ 27 ರಂದು, ಸಾಶಾ ಎಂಬ ಹೆಣ್ಣು ಚೀತಾ ಮೂತ್ರಪಿಂಡದ ಕಾಯಿಲೆಯಿಂದ ಸಾವನ್ನಪ್ಪಿತು, ಏಪ್ರಿಲ್ 23 ರಂದು, ಉದಯ್ ಹೃದಯ-ಶ್ವಾಸಕೋಶದ ವೈಫಲ್ಯದಿಂದ ಮತ್ತು ಮೇ 9 ರಂದು, ದಕ್ಷ ಎಂಬ ಹೆಣ್ಣು ಚಿರತೆಯು ಸಂಭೋಗ ಪ್ರಯತ್ನದ ಸಮಯದಲ್ಲಿ ಗಂಡು ಚೀತಾ ಜತೆಗಿನ ಕಾದಾಟದಲ್ಲಿ ಹಿಂಸಾತ್ಮಕ ಸಾವಿಗೀಡಾಗಿತ್ತು. ಎರಡು ಚೀತಾ ಮರಿಗಳು ಮೇ 25 ರಂದು “ತೀವ್ರ ಹವಾಮಾನ ಪರಿಸ್ಥಿತಿ ಮತ್ತು ನಿರ್ಜಲೀಕರಣ” ದಿಂದ ಸಾವನ್ನಪ್ಪಿವೆ.

- Advertisement -

ಮೇ ತಿಂಗಳಲ್ಲಿ ಆರು ಸಾವುಗಳ ನಂತರ, ದಕ್ಷಿಣ ಆಫ್ರಿಕಾದ ವನ್ಯಜೀವಿ ತಜ್ಞ ವಿನ್ಸೆಂಟ್ ವ್ಯಾನ್ ಡೆರ್ ಮೆರ್ವೆ ಮತ್ತಷ್ಟು ಚೀತಾಗಳು ಸಾವಿಗೀಡಾಗುವ ಸಾಧ್ಯತೆ ಇದೆ ಎಂದು ಹೇಳಿದ್ದರು.