ಕಣ್ಣು ಮುಚ್ಚಿ ಚೆಸ್ ಜೋಡಿಸಿ ಗಿನ್ನೆಸ್ ದಾಖಲೆ ಬರೆದ 10 ವರ್ಷದ ಪೋರಿ

Prasthutha|

 ಕೌಲಾಲಂಪುರ : ಮಲೇಷಿಯಾದ 10 ವರ್ಷದ ಚೆಸ್ ಪಟು ಪುನೀತಾಮಲರ್​ ರಾಜಶೇಖರ್ ಕಣ್ಣುಮುಚ್ಚಿ ಚೆಸ್ ಜೋಡಿಸಿ ಗಿನ್ನೆಸ್ ವಿಶ್ವದಾಖಲೆ ನಿರ್ಮಿಸಿದ್ದಾಳೆ.

- Advertisement -

ಕೇವಲ 45.72 ಸೆಕೆಂಡ್‌ಗಳಲ್ಲಿ ಚೆಸ್ ಬೋರ್ಡ್ ಅನ್ನು ಯಶಸ್ವಿಯಾಗಿ ಜೋಡಿಸಿ ಮುಂದಿನ ಹಂತಕ್ಕೆ ಆಟವನ್ನು ಕೊಂಡೊಯ್ದು ಗಮನ ಪುನೀತಾಮಲರ್​ ಸೆಳೆದಿದ್ದಾಳೆ. ಈ ಮೂಲಕ Quickest blindfolded chess set arrangement ಗಾಗಿ ಪ್ರತಿಷ್ಠಿತ ಗಿನ್ನೀಸ್​ ವಿಶ್ವ ದಾಖಲೆಯನ್ನು ಈಕೆ ಗಳಿಸಿದ್ದಾಳೆ.

ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಜೊತೆ ಮಾತನಾಡಿದ ಈಕೆ, ‘ನನ್ನ ತಂದೆಯೇ ನನ್ನ ತರಬೇತುದಾರರು. ನಾವು ಪ್ರತೀದಿನ ಒಟ್ಟಿಗೇ ಆಡುತ್ತೇವೆ. ಅಲ್ಲದೇ, ಅಸಾಧಾರಣ ಸಾಧಕರ ಕುರಿತು ಸಾಕ್ಷ್ಯಚಿತ್ರವನ್ನು ವೀಕ್ಷಿಸುತ್ತಿರುವಾಗ ನನಗೂ ವಿಶ್ವದಾಖಲೆಗಾಗಿ ಪ್ರಯತ್ನಿಸಬೇಕು ಎಂಬ ಆಲೋಚನೆ ಬಂದಿತು ಎಂದಿದ್ದಾಳೆ.

- Advertisement -

‘ತಮ್ಮ ಮಿತಿಗಳನ್ನು ಮೀರಿ ಮತ್ತು ನಂಬಲು ಆಗದಂಥ ಸಾಧನೆಗಳನ್ನು ಮಾಡಿದ ಸಾಧಕರು ನನಗೆ ನಿಜಕ್ಕೂ ಸ್ಫೂರ್ತಿ ಕೊಡುತ್ತಾರೆ. ಈಗಾಗಲೇ ಕಿಡ್ಸ್ ಗಾಟ್ ಟ್ಯಾಲೆಂಟ್‌ನಂತಹ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ ಮತ್ತು ಇನ್ನೂ ಹೆಚ್ಚಿನ ಸಾಧನೆ ಮಾಡಲು ಬಯಸುತ್ತೇನೆ.’ ಎಂದಿದ್ಧಾಳೆ ಪುನೀತಾಮಲರ್.

Join Whatsapp