ಅಬುಧಾಬಿ: ಸಂಬಂಧಿಯಿಂದಲೇ ಹತ್ಯೆಯಾದ ಮಲಯಾಳಿ ಯುವಕ

Prasthutha|

ಅಬುಧಾಬಿ: ಮಲಯಾಳಿ ಯುವಕನನ್ನು ಆತನ ಸಂಬಂಧಿಯೊಬ್ಬ ಚಾಕುವಿನಿಂದ ಇರಿದು ಹತ್ಯೆಗೈದ ಘಟನೆ ಅಬುಧಾಬಿಯ ಮುಸಾಫಾದಲ್ಲಿ ನಡೆದಿದೆ.

- Advertisement -

ಅಬುಧಾಬಿಯಲ್ಲಿ ಸ್ವಂತ ಗ್ರಾಫಿಕ್ ಡಿಸೈನಿಂಗ್ ಸಂಸ್ಥೆ ನಡೆಸುತ್ತಿರುವ ಮಲಪ್ಪುರಂನ ಚಂಙರಂಕುಳಂ ನಿವಾಸಿ ಯಾಸಿರ್ ಅರಾಫತ್ (39) ಕೊಲೆಯಾದವರು.

ಉದ್ಯೋಗಕ್ಕಾಗಿ ವಿಸಿಟಿಂಗ್ ವೀಸಾದಲ್ಲಿ ಅಬುಧಾಬಿಗೆ ಬಂದಿದ್ದ ಪೆರುಂಬಡಪ್ಪ್ ಮೂಲದ ಘಜ್ನಿ ಎಂಬಾತ ಯಾಸಿರ್ ಗೆ ಚಾಕುವಿನಿಂದ ಇರಿದಿದ್ದಾನೆ.

- Advertisement -

ವಹಿವಾಟಿನ ಬಗ್ಗೆ ನಡೆದ ಚರ್ಚೆಯು ವಿಕೋಪಕ್ಕೆ ತಿರುಗಿದ್ದು, ಗಜ್ನಿ ಕೋಪಗೊಂಡು ಯಾಸಿರ್‌ಗೆ ಇರಿದಿದ್ದಾನೆ.

ಮೃತ ಯಾಸಿರ್ ಪತ್ನಿ ಗರ್ಭಿಣಿಯಾಗಿದ್ದು, ಅವರಿಗೆ ಇಬ್ಬರು ಮಕ್ಕಳಿದ್ದಾರೆ.

Join Whatsapp