ರಸ್ತೆ ಅಪಘಾತ: ಮಲಯಾಳಂ ಕಿರುತೆರೆ ನಟ ಕೊಲ್ಲಂ ಸುಧಿ ನಿಧನ

Prasthutha|

ನವದೆಹಲಿ: ಮಲಯಾಳಂ ಕಿರುತೆರೆ- ಹಿರಿತೆರೆಯಲ್ಲಿ ಹಾಸ್ಯ ಪಾತ್ರಗಳ ಮೂಲಕ ಗಮನ ಸೆಳೆದಿದ್ದ ಕೊಲ್ಲಂ ಸುಧಿ ಅವರು ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.

- Advertisement -

ಇಂದು (ಜೂನ್ 5) ಮುಂಜಾನೆ ಈ ಅಪಘಾತ ನಡೆದಿದೆ. ಅವರ ಸಾವಿಗೆ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಸಂತಾಪ ಸೂಚಿಸಿದ್ದಾರೆ.

ತ್ರಿಶೂರ್ ಸಮೀಪ ಮುಂಜಾನೆ 4:30ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಅವರು ವಡಕರಾದಲ್ಲಿ ಕಾರ್ಯಕ್ರಮ ಒಂದನ್ನು ಮುಗಿಸಿ ಮರಳುತ್ತಿದ್ದರು. ಈ ವೇಳೆ ನಟನ ಕಾರಿಗೆ ಟ್ರಕ್ಗೆ ಡಿಕ್ಕಿ ಹೊಡೆದಿದೆ. ಟ್ರಕ್ ಗುದ್ದಿದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ತೀವ್ರವಾಗಿ ಗಾಯಗೊಂಡ ಕೊಲ್ಲಂ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ಜೊತೆಗೆದ್ದ ಸಹ ಕಲಾವಿದರಾದ ಬಿನು ಅಡಿಮಾಲಿ ಮತ್ತು ಉಳ್ಳಾಸ್ ಪಂದಳಂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

Join Whatsapp