ತನ್ನ ಮೊದಲ ಚಿತ್ರ ಬಿಡುಗಡೆ ಹಂತದಲ್ಲಿ ನಿಧನರಾದ ಮಲಯಾಳಂ ನಿರ್ದೇಶಕ ಜೇಮ್ಸ್

Prasthutha|

ತಿರುವನಂತಪುರ: ಮಲಯಾಳಂ ಚಿತ್ರ ನಿರ್ದೇಶಕ ಜೋಸೆಫ್ ಮನು ಜೇಮ್ಸ್ ನಿಧನರಾಗಿದ್ದಾರೆ.

- Advertisement -


ಅವರಿಗೆ 31 ವರ್ಷ ಪ್ರಾಯವಾಗಿತ್ತು.


ಹೆಪಟೈಟಿಸ್ ಚಿಕಿತ್ಸೆಗೆ ಆಸ್ಪತ್ರೆಗೆ ಸೇರಿದ್ದ ಅವರು ಫೆಬ್ರವರಿ 24ರಂದೇ ಕೊನೆಯುಸಿರೆಳೆದರು. ಅವರ ನಿರ್ದೇಶನದ ಮೊದಲ ಚಿತ್ರ ‘ನ್ಯಾನ್ಸಿ ರಾಣಿ’ ಬಿಡುಗಡೆಗೆ ಕೆಲವೇ ದಿನ ಮೊದಲು ಅವರು ಸಾವನ್ನಪ್ಪಿದ್ದಾರೆ.
ಜೇಮ್ಸ್ ಅವರ ಅಕಾಲಿಕ ನಿಧನಕ್ಕೆ ‘ನ್ಯಾನ್ಸಿ ರಾಣಿ’ ಚಿತ್ರದಲ್ಲಿ ಅವರ ಜೊತೆಗೆ ಕೆಲಸ ಮಾಡಿದ ಅಜು ವರ್ಗಿಸ್ ಶ್ರದ್ಧಾಂಜಲಿ ಅರ್ಪಿಸುತ್ತ ‘ಸಹೋದರ ತುಂಬ ಬೇಗ ಹೋಗಿ ಬಿಟ್ಟೆ’ ಎಂದು ಜಾಲ ತಾಣದಲ್ಲಿ ಬರೆದಿದ್ದಾರೆ.

- Advertisement -


‘ನ್ಯಾನ್ಸಿ ರಾಣಿ’ ಚಿತ್ರದ ನಾಯಕಿ ಅಹನಾ ಕೃಷ್ಣ ಅವರು ಸಹ ಶೋಕ ವ್ಯಕ್ತಪಡಿಸಿದ್ದಾರೆ.
‘ಶಾಂತಿಯ ಸದನದಲ್ಲಿ ನೆಲೆಸಿರಿ ಮನು, ಇದು ನಿಮಗೆ ಆಗಬಾರದಿತ್ತು’ ಎಂದು ಆಕೆ ಇನ್ ಸ್ಟಾಗ್ರಾಮ್ ನಲ್ಲಿ ಬರೆದಿದ್ದಾರೆ.
ಜೋಸೆಫ್ ಮನು ಜೇಮ್ಸ್ ಬಾಲ ನಟನಾಗಿ ಚಿತ್ರರಂಗ ಪ್ರವೇಶಿಸಿದ್ದರು. 2004ರಲ್ಲಿ ಸಾಬು ಜೇಮ್ಸ್ ನಿರ್ದೇಶಿಸಿದ ‘ಅಯಾಮ್ ಕ್ಯೂರಿಯಸ್’ ನಲ್ಲಿ ಅವರು ಬಾಲ ನಟ ಆಗಿದ್ದರು. ಆಮೇಲೆ ಜೋಸೆಫ್ ಮನು ಮಲಯಾಳಂ, ಕನ್ನಡ, ಹಿಂದಿ ಚಿತ್ರರಂಗದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದರು. ಭಾನುವಾರ ಅವರ ಅಂತ್ಯಕ್ರಿಯೆ ನಡೆಯಿತು.



Join Whatsapp