ಮಂಗಳೂರು: ಪುತ್ತೂರಿನಲ್ಲಿ ನಡೆದ ಬಿಜೆಪಿ ಪಕ್ಷದ ನಾರಿ ಶಕ್ತಿ ಸಮಾವೇಶದಲ್ಲಿ ಮಾಳವಿಕಾ ಅವಿನಾಶ್ ರವರು ದ.ಕ.ಜಿಲ್ಲೆಯ ಜನರ ರಕ್ತ ಕೇಸರಿ ಎಂದು ಹೇಳಿದ್ದಾರೆ.
ಮಾಳವಿಕಾ ರವರು ಅರಿತಿಲ್ಲ ದ.ಕ.ಜಿಲ್ಲೆಯ ಜನರನ್ನು ಮತೀಯ ಸಂಕೇತ, ಚಿಹ್ನೆ, ಪದಬಳಕೆಗಳನ್ನು ಹರಿಬಿಟ್ಟು ಇಲ್ಲಿನ ಜನತೆಯನ್ನು ಆ ಕಾರಣಕ್ಕಾಗಿ ವಿಭಜಿಸಿ ಘರ್ಷಣೆಗೆ ಎಳೆದು ಹಾಕಿ, ಫಸಲು ಕೊಯ್ಯುವ ಕಾರ್ಯ ಅಂತ ಮಾಳವಿಕಾ ಅವರು ತಿಳಿಯಲಿ ಎಂದು ಮಾಜಿ ಮೇಯರ್ ಅಶ್ರಫ್ ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ದ.ಕ.ಜಿಲ್ಲೆಯ ಜನರ ರಕ್ತ ಕೇಸರಿ ಅಲ್ಲ,ಅದು ಕೆಂಪು ಆಗಿಯೇ ಉಳಿದಿದೆ . ಆದರೆ ಜಿಲ್ಲೆಯ ಅಸ್ಮಿತೆಯ ಬಗ್ಗೆ ಲವ ಲೇಶವೂ ತಿಳಿಯದ ಮಾಳವಿಕಾ ರವರ ಕಣ್ಣು ಹಳದಿ ಆಗಿದೆ, ಆದುದರಿಂದಲೇ ಮಾಳವಿಕಾ ರವರು ಕೇಸರಿ ಅಲ್ಲದ ತನ್ನ ರಕ್ತ ಕೆಂಪು ಎಂದು ಗೊತ್ತಿದ್ದರೂ ದ.ಕ.ಜಿಲ್ಲೆಯ ಜನರ ರಕ್ತದ ಬಣ್ಣವನ್ನು ಬದಲಿಸಲು ಹೊರಟಿದ್ದಾರೆ. ಮಾಳವಿಕಾ ರಂತಹ ಹಳದಿ ಕಣ್ಣಿನ ನಾರಿಗಳು ಭಾರತದಲ್ಲಿ ರುವುದರಿಂದಲೇ ದ.ಕ.ಜಿಲ್ಲೆಯ ಜನರ ರಕ್ತವನ್ನು ಕಪ್ಪು ಬಣ್ಣಕ್ಕೆ ಹೆಪ್ಪು ಗಟ್ಟಿಸುವ ಈ ಹಿಂದಿನ ಹಲವು ಪ್ರಯತ್ನಗಳಿಂದಲೇ ಅಮಾಯಕ ಮುಗ್ಧ ಜನರು ಜಾತಿ ಧರ್ಮದ ಹೆಸರಲ್ಲಿ ಪ್ರಾಣ ಹಾನಿ ಗೊಳಗಾಗಲು ಕಾರಣ. ಮಾಳವಿಕಾ ಇನ್ನಾದರೂ ತನ್ನ ಹಳದಿ ಕಣ್ಣಿನಿಂದ ದ.ಕ.ಜಿಲ್ಲೆ ಮಾತ್ರವಲ್ಲ ಇಡೀ ದೇಶದ ಜನರ ರಕ್ತ ಕೆಂಪು ಎಂದು ಅರಿತು ಅದನ್ನು ಹೆಪ್ಪುಗಟ್ಟುವ ಕಪ್ಪು ಬಣ್ಣಕ್ಕೆ ತಿರುಗಿಸದಿರುವ ಕಾರ್ಯಕ್ಕೆ ಮುಂದಾಗಲಿ ಎಂದು ಹೇಳಿದ್ದಾರೆ.