ಜಗತ್ತಿನ ಮೊದಲ ಮಲೇರಿಯಾ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ

Prasthutha|

ನ್ಯೂಯಾರ್ಕ್: ಮಲೇರಿಯಾ ರೋಗಕ್ಕೆ ಕೊನೆಗೂ ಔಷಧ ದೊರೆಯುವುದು ಖಾತ್ರಿಯಾಗಿದೆ. ಮಕ್ಕಳಿಗಾಗಿ ಅಭಿವೃದ್ಧಿಪಡಿಸಲಾದ ಜಗತ್ತಿನ ಮೊದಲ ಮಲೇರಿಯಾ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ ನೀಡಿದೆ.

- Advertisement -


‘ಮಾಸ್ಕಿರಿಕ್ಸ್’ ಹೆಸರಿನ ಮಲೇರಿಯಾ ಲಸಿಕೆ ಇದಾಗಿದೆ. ಮೊದಲು ಇದನ್ನು ಮಲೇರಿಯಾಪೀಡಿತ ಖಂಡವಾದ ಆಫ್ರಿಕದಾದ್ಯಂತ ನೀಡಲು WHO ನಿರ್ಧರಿಸಿದೆ. ಈ ಲಸಿಕೆಯನ್ನು ಒಂದೂವರೆ ತಿಂಗಳ ಮಗುವಿನಿಂದ ಹಿಡಿದು 17 ತಿಂಗಳ ಮಕ್ಕಳಿಗೆ ನೀಡಬಹುದಾಗಿದೆ. ಅಷ್ಟೇ ಅಲ್ಲ, ಇದು ಹೆಪಟೈಟಿಸ್ ಬಿ ವೈರಸ್ ನಿಂದ ಉಂಟಾಗುವ ಯಕೃತ್ತಿನ ಸೋಂಕಿನ ವಿರುದ್ಧವೂ ಹೋರಾಡುತ್ತದೆ.


ಹೆಣ್ಣು ಅನಾಫಿಲಿಸ್ ಸೊಳ್ಳೆಯ ಮೂಲಕ ಹರಡುವ ಮಲೇರಿಯಾದಿಂದ ವಿಶ್ವದಲ್ಲಿ ಪ್ರತಿ ಎರಡು ನಿಮಿಷಕ್ಕೊಮ್ಮೆ ಒಂದು ಮಗು ಮರಣ ಹೊಂದುತ್ತದೆ.ಅಲ್ಲದೆ ಪ್ರತಿ ವರ್ಷ 4 ಲಕ್ಷಕ್ಕೂ ಅಧಿಕ ಜನರನ್ನು ಬಲಿ ಪಡೆಯುತ್ತದೆ.

- Advertisement -


ಮಾಸ್ಕಿರಿಕ್ಸ್ ವ್ಯಾಕ್ಸಿನ್ ಅನ್ನು 1987 ರಲ್ಲೇ ಗ್ಲಾಕ್ಸೊಸ್ಮಿತ್‌ ಕ್ಲೈನ್ ಹೆಸರಿನ ಔಷಧ ಕಂಪನಿ ಅಭಿವೃದ್ಧಿಪಡಿಸಿತ್ತಾದರೂ ಅನೇಕ ಸವಾಲುಗಳನ್ನು ಎದುರಿಸುತ್ತಿತ್ತು. 2019ರಲ್ಲಿ ಲಸಿಕೆ ಪ್ರಯೋಗ ಆರಂಭಿಸಲಾಗಿದ್ದು, ಆಫ್ರಿಕಾದ ಘಾನಾ, ಕೀನ್ಯಾ ಮತ್ತು ಮಲಾವಿ ರಾಷ್ಟ್ರಗಳಲ್ಲಿ 2.3 ಮಿಲಿಯನ್ ಡೋಸ್ ಗಳನ್ನು ನೀಡಲಾಗಿದೆ.

Join Whatsapp