ಅಂಗನವಾಡಿಗೆ ಧ್ವಜಸ್ಥಂಭ ಅರ್ಪಿಸಿದ ಮಲಾರ್ ಹೆಲ್ಪ್ ಲೈನ್

Prasthutha|

►ಅಕ್ಷರ ನಗರ ಅಂಗನವಾಡಿ ಕೇಂದ್ರದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಶಿಕ್ಷಕಿಗೆ ಸನ್ಮಾನ

- Advertisement -

ಉಳ್ಳಾಲ: ಮಲಾರ್ ಹೆಲ್ಪ್ ಲೈನ್ ಹಾಗೂ ಮಲಾರ್ ಅಕ್ಷರನಗರ ಅಂಗನವಾಡಿ ಕೇಂದ್ರ ಜಂಟಿ ಆಶ್ರಯದಲ್ಲಿ 77 ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮದಲ್ಲಿ ಮಲಾರ್ ಹೆಲ್ಪ್ ಲೈನ್ ವತಿಯಿಂದ ನೂತನವಾಗಿ ನಿರ್ಮಿಸಿದ ಧ್ವಜಸ್ಥಂಭವನ್ನು ಅರ್ಪಿಸಲಾಯಿತು. ಮಲಾರ್ ಹೆಲ್ಪ್ ಲೈನ್ ಅಧ್ಯಕ್ಷ ಕಬೀರ್ ಮಲಾರ್ ಧ್ವಜಾರೋಹಣ ನೆರವೇರಿಸಿದರು.

ಈ ವೇಳೆ ಮಲಾರ್‌ ಅಕ್ಷರ ನಗರ ಅಂಗನವಾಡಿ ಕೇಂದ್ರದಲ್ಲಿ ಸುಮಾರು 27 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಸುಂದರಿ ಟೀಚರ್ ರವರಿಗೆ ಸಂಸ್ಥೆಯ ವತಿಯಿಂದ ಊರಿನ ಮಹಿಳೆಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.

- Advertisement -

ಪಂಚಾಯತ್ ಅಧ್ಯಕ್ಷರಾದ ಸಾತ್ಕೋ ಅಬ್ದುಲ್‌ ಮಜೀದ್, ಉಪಾಧ್ಯಕ್ಷೆ ಮೆಹರುನ್ನಿಸಾ ಬಶೀರ್‌, ಸುಂದರಿ ಟೀಚರ್ ರವರು ಹಿತವಚನ ನೀಡಿದರು.

ಮಲಾರ್ ಹೆಲ್ತ್‌ ಲೈನ್ ಸಂಚಾಲಕರಾದ ಶಮೀರ್ ಟಿಪ್ಪುನಗರ ಸ್ವಾತಂತ್ರ್ಯ ಸಂದೇಶ ಭಾಷಣ ಮಾಡಿದರು. ತಾಲೂಕು ಪಂಚಾಯತ್‌ ಮಾಜೀ ಅಧ್ಯಕ್ಷರಾದ ಮುಹಮ್ಮದ್ ಮೋನು ರವರು ಸ್ವಾತಂತ್ರ್ಯ ಸಂದೇಶದೊಂದಿಗೆ ಸಂಸ್ಥೆಯ ಕೆಲಸಕಾರ್ಯದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಪಾವೂರು ಗ್ರಾಮ ಪಂಚಾಯತ್‌ ಮಾಜಿ ಅಧ್ಯಕ್ಷರಾದ ಕಮರುನ್ನಿಸಾ ನೌಫಲ್ ರವರು ಹಿತನುಡಿಗಳನ್ನಾಡಿದರು. ಗ್ರಾಮ ಪಂಚಾಯತ್ ಸದಸ್ಯರಾದ ರಿಝ್ವಾನ್ ಉಪಸ್ಥಿತರಿದ್ದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸಮದ್ ಜಿ. ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Join Whatsapp