ಮಳಲಿ ಮಸೀದಿ ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ

Prasthutha|

►ಇಂದಿನ ವಿಚಾರಣೆಯ ಪ್ರಮುಖ ಹೈಲೆಟ್ಸ್

- Advertisement -

ಮಂಗಳೂರು: ಮಳಲಿ ಮಸೀದಿ ಅರ್ಜಿ ವಿಚಾರಣೆಯನ್ನು ಮಂಗಳೂರು ಮೂರನೇ ಹೆಚ್ಚುವರಿ ಸಿವಿಲ್ ಕೋರ್ಟ್ ನಾಳೆಗೆ ಮುಂದೂಡಿದೆ.

ಮಳಲಿ ಮಸೀದಿ ಅರ್ಜಿ ವಿಚಾರಣೆಯ ಪ್ರಮುಖ ಹೈಲೆಟ್ಸ್

- Advertisement -

ವಿಎಚ್ ಪಿ ವಕೀಲರು ನ್ಯಾಯಾಲಯದಲ್ಲಿ ವಾದ ಮಂಡನೆ ನಡೆದ್ದು, ನವೀಕರಣ ಸಮಯದಲ್ಲಿ ಅಲ್ಲಿ ದೇವಸ್ಥಾನದ ಮಾದರಿ ಸಿಕ್ಕಿದೆ. ಅದರ ಫೋಟೋಗಳನ್ನು ನೀಡಲಾಗಿದೆ. ಇದೊಂದು ಜ್ಞಾನವಾಪಿ ಮಾದರಿ ಪ್ರಕರಣ, ಸತ್ಯಾಸತ್ಯತೆ ತಿಳಿಯಬೇಕು. ಹೀಗಾಗಿ ಜ್ಞಾನವಾಪಿ ಮಾದರಿಯಲ್ಲಿ ಮಸೀದಿ ಜಾಗದ ಸರ್ವೇ ನಡೆಯಬೇಕು. ಕೋರ್ಟ್ ಕಮಿಷನರ್ ನೇತೃತ್ವದಲ್ಲಿ ತಜ್ಞರ ಸಮಿತಿ ನೇಮಿಸಬೇಕು ಎಂದು ಮನವಿ ಮಾಡಲಾಗಿದೆ.


ವಿಎಚ್ ಪಿ ಪರ ವಕೀಲರ ವಾದಕ್ಕೆ ಮಸೀದಿ ಕಮಿಟಿ ವಕೀಲ ಆಕ್ಷೇಪ ವ್ಯಕ್ತಪಡಿಸಿದ್ದಾರೆ, ಈ ಮಸೀದಿಗೆ 700 ವರ್ಷಗಳ ಇತಿಹಾಸವಿದೆ. ಅದು ಸರಕಾರಿ ಜಾಗ. ಇಲ್ಲಿ ಯಾವ ದೇವಸ್ಥಾನ ಇತ್ತು ಎಂದು ಸಾಕ್ಷ್ಯ ಒದಗಿಸಲಿ. ಮಳಲಿ ಮುಸ್ಲಿಮರು ಹಲವು ವರ್ಷಗಳಿಂದ ಇಲ್ಲಿ ಅವರ ಧಾರ್ಮಿಕ ಕ್ರಿಯೆ ಮಾಡ್ತಿದಾರೆ. ನ್ಯಾಯಾಲಯ ಅವರ ಅರ್ಜಿ ವಜಾ ಮಾಡಿ ಮಸೀದಿ ನವೀಕರಣದ ಅನುಮತಿ ಕೊಡಲಿ ಎಂದು ಹೇಳಿದ್ದಾರೆ.


ಮಧ್ಯಾಹ್ನ ಬಳಿಕ ಮತ್ತೆ ವಿಚಾರಣೆ ಮುಂದುವರೆದಿದ್ದು, ವಿಎಚ್ ಪಿ ಪರ ವಕೀಲ ಚಿದಾನಂದ ಕೆದಿಲಾಯ ವಾದ ಮಂಡಿಸಿದ್ದಾರೆ. ವಿವಾದಿತ ಜಾಗದಲ್ಲಿರುವ ಪ್ರಾಚೀನ ರಚನೆಯನ್ನು ನ್ಯಾಯಾಲಯ ಗಮನಿಸಬೇಕು. ಇದೊಂದು ಹಳೆಯ ಸ್ಮಾರಕ ಕಟ್ಟಡದ ಸ್ವರೂಪವಾಗಿದ್ದು, ಸರ್ವೇ ನಡೆಯಬೇಕು. ಅದರಲ್ಲಿರುವ ವಾಸ್ತುಶಿಲ್ಪದ ಚಿತ್ರಗಳು, ಗೋಡೆ, ಕೆತ್ತನೆಗಳನ್ನು ಗಮನಿಸಿದರೆ ಸ್ಪಷ್ಟವಾಗುತ್ತೆ. ಇದರ ಐತಿಹಾಸಿಕ ಸ್ವರೂಪದ ಆಧಾರದ ಮೇಲೆ ಅದರ ಸ್ವರೂಪದ ಬಗ್ಗೆ ವರದಿಯ ಅಗತ್ಯವಿದೆ. ಭೂಮಿಯನ್ನು ಅಗೆದು ಯಾವುದೇ ಪುರಾತನ ಸ್ಮಾರಕ ರಚನೆ, ಪ್ರತಿಮೆ ಇದೆಯೇ ಎಂದು ಕಂಡುಹಿಡಿಯಬೇಕಿದೆ. ಅದರಲ್ಲಿರುವ ರಚನೆ ಮತ್ತು ಸ್ಮಾರಕಗಳ ವಯಸ್ಸಿನ ಬಗ್ಗೆ ವರದಿ ಸಲ್ಲಿಸಲು ಕೋರ್ಟ್ ಕಮಿಷನರ್ ಬೇಕು. ರಚನೆಯ ಒಟ್ಟಾರೆ ಸ್ವರೂಪ ಅಥವಾ ನೆಲೆಗೊಂಡಿರುವ ಯಾವುದೇ ಸ್ಮಾರಕದ ಬಗ್ಗೆ ವೈಜ್ಞಾನಿಕ ವರದಿಯ ಅಗತ್ಯವಿದೆ ಎಂದಿದ್ದಾರೆ.


ವಿಚಾರಣೆ ಅಂತ್ಯಕ್ಕೂ ಮುನ್ನ ಮಸೀದಿ ಪರ ವಕೀಲ ವಾದ ಮಾಡಿಸಿದ್ದು, ರಾಮಜನ್ಮ ಭೂಮಿಗೂ ಮಳಲಿ ಮಸೀದಿ ವಿವಾದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ರಾಮ ಜನ್ಮ ನೀಡಿದ ಸ್ಥಳ ಎಂಬ ಕಾರಣಕ್ಕೆ ರಾಮಜನ್ಮ ಭೂಮಿಗೆ ಬೇಡಿಕೆ ಇಡಲಾಗಿತ್ತು. ಸ್ವಾತಂತ್ರ್ಯದ ಸಂದರ್ಭದಲ್ಲಿ ಇದ್ದ ಧಾರ್ಮಿಕ ಸ್ಥಳಗಳು ಹಾಗೆಯೇ ಇರಬೇಕು ಎಂಬ ಕಾನೂನಿದೆ. ಯಾವುದೇ ಬದಲಾವಣೆಗಳಿಲ್ಲ, ಈ ನಿಯಮವನ್ನು 1991 ರಲ್ಲಿ ಜಾರಿಗೆ ತರಲಾಗಿದೆ ಎಂದು ತಿಳಿಸಿದರು.



Join Whatsapp