ಮಂಗಳೂರು: ತಾಲೂಕಿನ ಮಳಲಿಪೇಟೆ ಮಸೀದಿ ನವೀಕರಣದ ಸಂದರ್ಭದಲ್ಲಿ ಸಂಘಪರಿವಾರದ ಕಾರ್ಯಕರ್ತರು ಮಸೀದಿ ದೇವಾಲಯದ ಮಾದರಿಯಲ್ಲಿದೆ ಎಂದು ವಿವಾದವೆಬ್ಬಿಸಿ ತನಿಖೆ ನಡೆಸಬೇಕೆಂದು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಆ ಪ್ರಕರಣದ ತೀರ್ಪನ್ನು ನ್ಯಾಯಾಲಯ ಮುಂದೂಡಿಕೆ ಮಾಡಿದೆ.
ಧನಂಜಯ ಮತ್ತು ಮತ್ತಿತರ ಐವರು ಮಸೀದಿಯ ಕುರಿತಂತೆ ಹೂಡಿದ ದಾವೆ ವಿರುದ್ಧ ವಾದ ಮಂಡಿಸಿದ ವಕೀಲರು, ಮಸೀದಿ ವಕ್ಫ್ ಆಸ್ತಿಯಾಗಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ವಕ್ಫ್ ಸಂಬಂಧಿತ ನ್ಯಾಯಾಲಯದ ಪರಿಧಿಗೆ ಬರುತ್ತದೆ. ಹಾಗಾಗಿ ಮಸೀದಿ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಬೇಕೆಂದು ಕೋರಿದರು.
ಈ ಕುರಿತು ವಾದ ಆಲಿಸಿದ್ದ ನ್ಯಾಯಾಲಯ ಸೆಪ್ಟೆಂಬರ್ 27ರಂದು ತೀರ್ಪು ಪ್ರಕಟಿಸುವುದಾಗಿ ಹೇಳಿತ್ತು. ಆದರೆ, ಅಕ್ಟೋಬರ್ 17ಕ್ಕೆ ತೀರ್ಪು ಮುಂದೂಡಿದೆ.