ಕೆಂಪೇಗೌಡ ಪ್ರತಿಮೆ ಅನಾವರಣ ಕಾರ್ಯಕ್ರಮವನ್ನು ಒಂದು ಪಕ್ಷದ ಕಾರ್ಯಕ್ರಮವನ್ನಾಗಿ ಮಾಡಿರುವುದು ಅಸಮಂಜಸ : ಬಿಜೆಪಿ ಎಂ ಎಲ್ ಸಿ ಎಚ್ ವಿಶ್ವನಾಥ್

Prasthutha|

ಬೆಂಗಳೂರು : ಇಂದು ಪ್ರಧಾನಿ ಮೋದಿ ಆಗಮಿಸಿ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣ ಮಾಡಿದ ಕಾರ್ಯಕ್ರಮವು ಒಂದು ಪಕ್ಷದ ಕಾರ್ಯಕ್ರಮವನ್ನಾಗಿ ಮಾಡಿರುವುದು ಸರಿಯಲ್ಲ ಎಂದು ಬಿಜೆಪಿ ಎಂ ಎಲ್ ಸಿ ಎಚ್ ವಿಶ್ವನಾಥ್ ಬಿಜೆಪಿಯ ವಿರುದ್ಧ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

- Advertisement -

ಬೆಂಗಳೂರು ವಿಮಾನ ನಿಲ್ದಾಣದ ಮುಂದೆ ಕೆಂಪೇಗೌಡರ ಪ್ರತಿಮೆ ಅನಾವರಣ ಗೊಳಿಸಿದ್ದು ಸಂತಸದ ವಿಚಾರ. ಆದರೆ ಇತರ ಯಾರನ್ನೂ ಕರೆಯದೆ ಒಂದೇ ಪಕ್ಷದ ಕಾರ್ಯಕ್ರಮದಂತೆ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಇದು ಸರ್ಕಾರದ ದುಡ್ಡಿನಿಂದ ಮಾಡಿದ ಸರಕಾರದ ಯೋಜನೆ. ಪಕ್ಷದ ಕಾರ್ಯಯೋಜನೆಯಲ್ಲ ಎಂದು ಅವರು ಕಿಡಿಕಾರಿದ್ದಾರೆ.

- Advertisement -

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು’ ಹಿರಿಯ ರಾಜಕಾರಣಿ ಹಾಗೂ ರಾಜ್ಯ ಸಭಾ ಸದಸ್ಯ ಹೆಚ್ ಡಿ ದೇವೇಗೌಡ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್ ಡಿ ಕುಮಾರಸ್ವಾಮಿ ಯಂತವರನ್ನು ಕರೆಯದೇ ಕಾರ್ಯಕ್ರಮ ಮಾಡಿದ್ದು ಅಸಮಂಜಸ ಎಂದು ಹೇಳಿದ್ದಾರೆ.



Join Whatsapp