ಸೌದಿ ಕ್ಯಾಬಿನೆಟ್‌ನಲ್ಲಿ ಮೇಜರ್ ಸರ್ಜರಿ| ಹೊಸ ಮಂತ್ರಿಗಳನ್ನು ನೇಮಿಸಿ ದೊರೆ ಸಲ್ಮಾನ್ ಆದೇಶ

Prasthutha|

ರಿಯಾದ್: ಸೌದಿ ಅರೇಬಿಯಾದ ದೊರೆ ಸಲ್ಮಾನ್ ಸಚಿವ ಸಂಪುಟದಲ್ಲಿ ಮಹತ್ವದ ಬದಲಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.

- Advertisement -

ಹಿರಿಯ ಪತ್ರಕರ್ತ ಸಲ್ಮಾನ್ ಬಿನ್ ಯೂಸುಫ್ ಅಲ್ದೋಸರಿ ಅವರನ್ನು ವಾರ್ತಾ ಸಚಿವರಾಗಿ ನೇಮಕ ಮಾಡಲಾಗಿದೆ. ಇಬ್ರಾಹಿಂ ಬಿನ್ ಮುಹಮ್ಮದ್ ಅಲ್ ಸುಲ್ತಾನ್ ಅವರನ್ನು ಸಚಿವ ಸ್ಥಾನದೊಂದಿಗೆ ಮಂತ್ರಿಮಂಡಲದ ಸದಸ್ಯರಾಗಿ ನೇಮಕ ಮಾಡಲಾಗಿದೆ. ರಕಾನ್ ಬಿನ್ ಇಬ್ರಾಹಿಂ ಅಲ್ ತೌಖ್ ಅವರನ್ನು ಸಾಂಸ್ಕೃತಿಕ ರಾಜ್ಯ ಸಚಿವರಾಗಿ ನೇಮಿಸಲಾಗಿದೆ.

ಇಸ್ಮಾಯಿಲ್ ಬಿನ್ ಸಯೀದ್ ಅಲ್‌ ಗಮ್ದಿ ಅವರನ್ನು ಮಾನವ ಸಂಪನ್ಮೂಲ ಮತ್ತು ಸಾಮಾಜಿಕ ಅಭಿವೃದ್ಧಿಯ ರಾಜ್ಯ ಸಚಿವರಾಗಿ ನೇಮಿಸಲಾಯಿತು. ಹಮೂದ್ ಅಲ್ ಮುರೈಖಿ ಅವರನ್ನು ಮಂತ್ರಿ ಪದವಿಯೊಂದಿಗೆ ರಾಯಲ್ ಕೋರ್ಟ್ ಸಲಹೆಗಾರನಾಗಿ ನೇಮಕ ಮಾಡಲಾಗಿದೆ.

- Advertisement -

ಲೆಫ್ಟಿನೆಂಟ್ ಜನರಲ್ ಮುಹಮ್ಮದ್ ಬಿನ್ ಅಮೀರ್ ಅಲ್ ಹರ್ಬಿ ಅವರನ್ನು ಗುಪ್ತಚರ ಇಲಾಖೆಯ ಉಪಾಧ್ಯಕ್ಷರಾಗಿ ನೇಮಿಸಲಾಯಿತು. ಡಾ| ಅಬ್ದುರ್ರಹ್ಮಾನ್ ಬಿನ್ ಹಮದ್ ಅಲ್ ಹರ್ಕನ್ ಅವರನ್ನು ರಿಯಲ್ ಎಸ್ಟೇಟ್ ಜನರಲ್ ಅಥಾರಿಟಿ ಗವರ್ನರ್ ಆಗಿ ನೇಮಿಸಲಾಗಿದೆ.

Join Whatsapp