ನಿರಂತರ ಪ್ರತಿಭಟನೆಯ ಮಧ್ಯೆ ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಷೆ ರಾಜೀನಾಮೆ

Prasthutha|

ಕೊಲಂಬೊ: ಶ್ರೀಲಂಕಾದಲ್ಲಿ ನಿರಂತರವಾಗಿ ನಡೆಯುತ್ತಿರುವ ಪ್ರತಿಭಟನೆಗಳ ಮಧ್ಯೆ ಪ್ರಧಾನ ಮಂತ್ರಿ ಸ್ಥಾನಕ್ಕೆ ಮಹಿಂದಾ ರಾಜಪಕ್ಷೆ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಶ್ರೀಲಂಕಾದ ಡೈಲಿ ಮಿರರ್ ವರದಿ ಮಾಡಿದೆ. ಲಂಕಾದಲ್ಲಿ ಏರ್ಪಟ್ಟಿರುವ ರಾಜಕೀಯ ಬಿಕ್ಕಟ್ಟಿಗೆ ಪರಿಹಾರವಾಗಿ ಅಧಿಕಾರದಿಂದ ಕೆಳಗಿಳಿಯುವಂತೆ ಆಗ್ರಹ ಹೆಚ್ಚಾಗಿತ್ತು.

- Advertisement -

1948 ರಲ್ಲಿ ಬ್ರಿಟನಿ ನಿಂದ ಸ್ವಾತಂತ್ರ್ಯಗೊಂಡ ಪಡೆದ ಬಳಿಕ ಶ್ರೀಲಂಕಾ ಪ್ರಸ್ತುತ ತೀವ್ರ ಆರ್ಥಿಕ ಸಂಕಷ್ಟದ ಸುಳಿಯಲ್ಲಿದೆ. ವಿದೇಶಿ ಕರೆನ್ಸಿಯ ಕೊರೆತೆಯಿಂದಾಗಿ ಬಿಕ್ಕಟ್ಟು ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

ಶ್ರೀಲಂಕಾದ ಅಧಿಕಾರಿಗಳು ಸೋಮವಾರ ರಾಷ್ಟ್ರದೆಲ್ಲೆಡೆ ಕರ್ಫ್ಯೂ ಹೇರಲಾಗಿದ್ದು, ಸರ್ಕಾರದ ಪರ ಗುಂಪು ಪ್ರತಿಭಟನಾಕಾರರ ಮೇಲೆ ದಾಳಿ ಮಾಡಿದ ಬಳಿಕ ಅಧ್ಯಕ್ಷ ಗೋಟಾಬಯ ರಾಜಪಕ್ಷೆ ಅವರ ಕಛೇರಿಯ ಹೊರಗೆ ಕನಿಷ್ಠ 23 ಜನರು ಗಾಯಗೊಂಡಿದ್ದಾರೆ. ಸದ್ಯ ರಾಜಧಾನಿಯಲ್ಲಿ ಸೇನಾ ಪಡೆಗಳನ್ನು ನಿಯೋಜಿಸಲಾಗಿದೆ.



Join Whatsapp