ಸಾವಿರಾರು ಕಾರ್ಯಕರ್ತರ ಜೊತೆ ಬೆಳಗಾವಿಗೆ ನುಗ್ಗುವ ಎಚ್ಚರಿಕೆ ನೀಡಿದ ಶಿವಸೇನೆ ಮುಖಂಡ

Prasthutha|

ಬೆಳಗಾವಿ: ಸಾವಿರಾರು ಕಾರ್ಯಕರ್ತರ ಜೊತೆ ನಾಳೆ ಬೆಳಗಾವಿಗೆ ನುಗ್ಗುತ್ತೇವೆ ಎಂದು ಮಹಾರಾಷ್ಟ್ರದ ಕೊಲ್ಲಾಪುರ ಶಿವಸೇನೆ ಜಿಲ್ಲಾಧ್ಯಕ್ಷ ವಿಜಯ್ ದೇವಣೆ ಎಚ್ಚರಿಕೆ ನೀಡಿದ್ದಾರೆ.

- Advertisement -

ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಮಾತನಾಡಿದ ಅಧಿವೇಶನ ವೇಳೆ ಕಲ್ಲು ತೂರಾಟ ನಡೆಸಿದ MES ಕಾರ್ಯಕರ್ತರ ವಿರುದ್ಧ ಹಾಕಲಾಗಿರುವ ದೇಶದ್ರೋಹ ಕೇಸ್ ವಾಪಸ್‌ ಪಡೆಯಲು ಆಗ್ರಹಿಸಿ ನಾಳೆ ಬೆಳಗಾವಿಗೆ ನುಗ್ಗಿ ಪ್ರತಿಭಟನೆ ನಡೆಸುವುದಾಗಿ ಅವರು ಹೇಳಿದ್ದಾರೆ.

ಕರ್ನಾಟಕ ಪೊಲೀಸರು ತಡೆಯಲು ಯತ್ನಿಸಿದರೂ ಅದನ್ನು ಭೇದಿಸಿ ಸಾವಿರಾರು ಸಂಖ್ಯೆಯ ಕಾರ್ಯಕರ್ತರ ಜೊತೆ ಬೆಳಗಾವಿಗೆ ನುಗ್ಗುತ್ತೇವೆ. ನಾಳೆ ಮಹಾರಾಷ್ಟ್ರದ ಕೊಲ್ಲಾಪುರದಿಂದ ಬೆಳಗಾವಿಗೆ ಶಿವಸೇನೆ ದಿಂಡಿ ಮಾರ್ಚ್ ನಡೆಸಲಿದೆ.ಪಲ್ಲಕ್ಕಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಇರಿಸಿ ಮೆರವಣಿಗೆಗೆ ನಿರ್ಧರಿಸಿದ್ದೇವೆ. ಶಿವಸೇನೆಯ ಹೋರಾಟ ಹತ್ತಿಕ್ಕುವ ಕೆಲಸ ಕರ್ನಾಟಕ ಸರ್ಕಾರ ಮಾಡುತ್ತಿದೆ. ನಾಳೆ ನಮ್ಮನ್ನ ತಡೆದರೂ ಕರ್ನಾಟಕ ಪೊಲೀಸರ ಸರ್ಪಗಾವಲು ಭೇದಿಸಿ ಒಳನುಗ್ಗುತ್ತೇವೆ ಎಂದು ಅವರು ತಿಳಿಸಿದ್ದಾರೆ.

Join Whatsapp