ಮಹಾರಾಷ್ಟ್ರ ಚುನಾವಣೆ: 40 ಬಂಡಾಯ ನಾಯಕರನ್ನು ಪಕ್ಷದಿಂದ ಉಚ್ಚಾಟಿಸಿದ ಬಿಜೆಪಿ

Prasthutha|

ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆಗೆ ಮುನ್ನ ಭಾರತೀಯ ಜನತಾ ಪಕ್ಷ (ಬಿಜೆಪಿ) ರಾಜ್ಯದಲ್ಲಿ ಮಹತ್ವದ ಕ್ರಮ ಕೈಗೊಂಡಿದೆ.

- Advertisement -

ಪಕ್ಷವು ವಿವಿಧ ವಿಧಾನಸಭಾ ಕ್ಷೇತ್ರಗಳಿಂದ 40 ಕಾರ್ಯಕರ್ತರು, ನಾಯಕರನ್ನು ಉಚ್ಚಾಟಿಸಿದೆ.

ಈ ಹಿಂದೆ ಉದ್ಧವ್ ಠಾಕ್ರೆ ಕೂಡ ಶಿವಸೇನೆ-ಯುಬಿಟಿ ಬಂಡಾಯವೆದ್ದವರ ವಿರುದ್ಧ ಕ್ರಮ ಕೈಗೊಂಡಿದ್ದರು. ಪಕ್ಷ ವಿರೋಧಿ ಕ್ರಮದಲ್ಲಿ 5 ನಾಯಕರನ್ನು ಉದ್ಧವ್ ಠಾಕ್ರೆ ಉಚ್ಚಾಟಿಸಿದ್ದರು. ಅವರಲ್ಲಿ ಮಾಜಿ ಭಿವಂಡಿ ಶಾಸಕರಾದ ರೂಪೇಶ್ ಮ್ಹಾತ್ರೆ, ವಿಶ್ವಾಸ್ ನಾಂದೇಕರ್, ಚಂದ್ರಕಾಂತ್ ಘುಗುಲ್, ಸಂಜಯ್ ಅವರಿ ಮತ್ತು ಪ್ರಸಾದ್ ಠಾಕ್ರೆ ಇದ್ದರು.

- Advertisement -

ಇತ್ತೀಚೆಗಷ್ಟೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಹಾಮೈತ್ರಿಕೂಟದ ನಾಯಕರಿಗೆ ಬಂಡಾಯವೆದ್ದವರು ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂದು ಸೂಚನೆ ನೀಡಿದ್ದರು.

ಮಹಾರಾಷ್ಟ್ರದ 288 ವಿಧಾನಸಭಾ ಸ್ಥಾನಗಳಿಗೆ ನವೆಂಬರ್ 20 ರಂದು ಮತದಾನ ನಡೆಯುತ್ತಿದೆ. ಈ ಸೀಟುಗಳ ಫಲಿತಾಂಶ ನವೆಂಬರ್ 23 ರಂದು ಪ್ರಕಟವಾಗಲಿದೆ.



Join Whatsapp