ಜೈ ಶ್ರೀರಾಂ ಹೇಳಲು ನಿರಾಕರಿಸಿದ ಮಹಾರಾಷ್ಟ್ರದ ಇಮಾಮರ ಗಡ್ಡ ಕತ್ತರಿಸಿ ಥಳಿಸಿದ ಸಂಘಪರಿವಾರ

Prasthutha|

ಮುಂಬೈ: ಮಹಾರಾಷ್ಟದ ಅನ್ವಾ ಗ್ರಾಮದಲ್ಲಿ ನಮಾಝ್ ನಿರ್ವಹಿಸುತ್ತಿದ್ದ ಇಮಾಮ್ ಒಬ್ಬರ ಮೇಲೆ ಸಂಘಪರಿವಾರದ ಕಾರ್ಯಕರ್ತರು ದಾಳಿ ನಡೆಸಿ ಹಲ್ಲೆ ಮಾಡಿದ್ದಾರೆ. ಜೈ ಶ್ರೀರಾಂ ಕೂಗಲು ಬೆದರಿಕೆ ಹಾಕಿದ್ದು, ಅದನ್ನು ಹೇಳಲು ನಿರಾಕರಿಸಿದ ಇಮಾಮರ ಗಡ್ಡ ಕತ್ತರಿಸಿ ಹಿಂಸೆ ನೀಡಿರುವ ಆಘಾತಕಾರಿ ಘಟನೆ ನಡೆದಿದೆ.

- Advertisement -


ಇಂಡಿಯಾ ಟುಡೆ ಜೊತೆಗೆ ಈ ಸಂಬಂಧ ಮಾತನಾಡಿದ ಇಮಾಮ್ ಜಾಕಿರ್ ಸಯ್ಯದ್ ಖಾಜಾ ಅವರು, ಈ ಘಟನೆಯು ಭಾನುವಾರ ಸಂಜೆ ಏಳು ಗಂಟೆಯ ಹೊತ್ತಿಗೆ ನಡೆದಿರುವುದಾಗಿ ತಿಳಿಸಿದ್ದಾರೆ. ಅವರು ಮಸೀದಿಯೊಳಗೆ ಕುಳಿತು ಕುರ್’ಆನ್ ಪಾರಾಯಣ ಮಾಡುತ್ತಿದ್ದಾಗ ದುಷ್ಕರ್ಮಿಗಳ ತಂಡ ಈ ದಾಳಿ ನಡೆಸಿದೆ.
ಅಪರಿಚಿತರು ಮುಖಕ್ಕೆ ಅಡ್ಡ ಬಟ್ಟೆ ಕಟ್ಟಿಕೊಂಡು ಬಂದು, ಕುರ್’ಆನ್ ಓದುವುದನ್ನು ನಿಲ್ಲಿಸುವಂತೆ ಸೂಚಿಸಿ, ತನ್ನನ್ನು ಎಳೆದು ಜೈ ಶ್ರೀರಾಂ ಹೇಳುವಂತೆ ಬೆದರಿಕೆ ಹಾಕಿದರು. ನಿರಾಕರಿಸಿದಾಗ ಮೂವರು ತನ್ನನ್ನು ಹೊರಗೆ ಎಳೆದೊಯ್ದು ಥಳಿಸಿದ್ದಾರೆ. ಆಮೇಲೆ ರಾಸಾಯನಿಕ ಸವರಿದ ಬಟ್ಟೆ ಮೂಗಿಗೆ ಇಟ್ಟರು ಎಂದು ಅವರು ತಿಳಿಸಿದ್ದಾರೆ.
ಪ್ರಜ್ಞೆ ಕಳೆದುಕೊಂಡ ಇಮಾಮರಿಗೆ ಪ್ರಜ್ಞೆ ಬಂದಾಗ ಅವರ ಗಡ್ಡವನ್ನು ಕತ್ತರಿಸಲಾಗಿತ್ತು


8 ಗಂಟೆಯ ಪ್ರಾರ್ಥನೆಗೆ ಜನರು ಮಸೀದಿಗೆ ಬಂದಾಗ ಇಮಾಮರು ಬಿದ್ದಿರುವುದನ್ನು ಕಂಡು ಅವರನ್ನು ಕೂಡಲೆ ಸಿಲ್ಲೋಡ್ ಆಸ್ಪತ್ರೆಗೆ ಸಾಗಿಸಿದ್ದಾರೆ. ಅನಂತರ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಔರಂಗಾಬಾದ್ ಸರಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಸೇರಿಸಲಾಗಿದೆ.

- Advertisement -


ವಿಷಯ ಬೆಳಕಿಗೆ ಬಂದ ಬಳಿಕ ಮಸೀದಿ ಇರುವ ಅನ್ವರ್ ನಗರ ಪ್ರದೇಶಕ್ಕೆ ಬಂದ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಬೋಕರ್ದಾನ್ ಪರದ್ ಪೊಲೀಸ್ ಠಾಣೆಯಲ್ಲಿ ಅಪರಿಚಿತರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಭಾರತೀಯ ದಂಡ ಸಂಹಿತೆಯ ಹಲ್ಲೆಯ ಉದ್ದೇಶದಿಂದ ಅಕ್ರಮ ಪ್ರವೇಶ 452, ಉದ್ದೇಶಪೂರ್ವಕವಾಗಿ ಹಾನಿ ಹೊಡೆತ 323, ಗುಂಪಿನಿಂದ ಅಪರಾಧೀ ಕೃತ್ಯ 34 ವಿಧಿಗಳಡಿ ಮೊಕದ್ದಮೆ ದಾಖಲಾಗಿದೆ.



Join Whatsapp