ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ ಮುಖ್ ರಾಜೀನಾಮೆ !

Prasthutha|

► ಮುಂಬೈ ಮಾಜಿ ಪೊಲೀಸ್ ವರಿಷ್ಠಾಧಿಕಾರಿಯಿಂದ 100 ಕೋಟಿ ಭ್ರಷ್ಟಾಚಾರದ ಆರೋಪ

- Advertisement -

ಮುಂಬೈನ ಮಾಜಿ ಪೊಲೀಸ್ ವರಿಷ್ಟಾಧಿಕಾರಿಯಾಗಿದ್ದ ಪರಂ ಬೀರ್ ಸಿಂಗ್ ಆರೋಪಿಸಿದ್ದ ಭ್ರಷ್ಟಾಚಾರದ ಕುರಿತಂತೆ ಇಂದು ಬಾಂಬೇ ಹೈಕೋರ್ಟ್ ಸಿಬಿಐ ತನಿಖೆಗೆ ಆದೇಶ್ ನೀಡಿದೆ. ಇದರ ಬೆನ್ನಿಗೇ ಗೃಹ ಸಚಿವ ಅನಿಲ್ ದೇಶ್ ಮುಖ್ ಅವರು ರಾಜೀನಾಮೆ ನೀಡಿದ್ದಾರೆ. ಪರಂ ಬೀರ್ ಸಿಂಗ್ ಅವರು ದೇಶ್ ಮುಖ್ ವಿರುದ್ಧ 100 ಕೋಟಿ ಭ್ರಷ್ಟಾಚಾರದ ಕುರಿತಂತೆ ಸುಪ್ರೀಮ್ ಕೋರ್ಟಿಗೆ ಮನವಿ ಸಲ್ಲಿಸಿದ್ದರು. ಸುಪ್ರೀಮ್ ಕೋರ್ಟ್ ಹೈಕೋರ್ಟಿಗೆ ಅರ್ಜಿ ಸಲ್ಲಿಸುವಂತೆ ಆದೇಶ ನೀಡಿತ್ತು. ಹೈಕೋರ್ಟ್ ಇದೀಗ ಸಿಬಿಐ ತನಿಖೆಗೆ ಅಸ್ತು ನೀಡಿರುವುದರಿಂದ ದೇಶ್ ಮುಖ್ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ದೇಶ್ ಮುಖ್, ಸಿಬಿಐ ತನಿಖೆ ನಡೆಯುವ ವೇಳೆ ನಾನು ಅಧಿಕಾರದಲ್ಲಿರುವ ನೈತಿಕತೆ ಅರ್ಥ ಮಾಡಿಕೊಂಡು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಹೇಳಿದ್ದಾರೆ. ರಾಜೀನಾಮೆಯಿಂದಾಗಿ ತೆರವಾಗಿರುವ ಮಹಾರಾಷ್ಟ್ರ ಗೃಹ ಖಾತೆಯನ್ನು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರೇ ಸದ್ಯ ನಿಭಾಯಿಸಲಿದ್ದಾರೆ ಎನ್ನಲಾಗಿದೆ

Join Whatsapp