ಕಲ್ಲು ಕ್ವಾರಿಯಲ್ಲಿ ಮುಳುಗಿ ಅತ್ತೆ, ಸೊಸೆ, ಇಬ್ಬರು ಮೊಮ್ಮಕ್ಕಳು ಸೇರಿ ಒಂದೇ ಕುಟುಂಬದ ಐವರು ಸಾವು

Prasthutha|

ದೊಂಬಿವಿಲಿ (ಮಹಾರಾಷ್ಟ್ರ): ಕಲ್ಲಿನ ಕ್ವಾರಿಯಲ್ಲಿ ಮುಳುಗಿ ಅತ್ತೆ, ಸೊಸೆ, ಇಬ್ಬರು ಮೊಮ್ಮಕ್ಕಳು ಹಾಗೂ ಓರ್ವ ಸಂಬಂಧಿ ಸೇರಿ ಒಂದೇ ಕುಟುಂಬದ ಐವರು ಮೃತಪಟ್ಟಿರುವ ದಾರುಣ ಘಟನೆ ಇಲ್ಲಿಗೆ ಸಮೀಪದ ಸಂದಾಪ ಗ್ರಾಮದಲ್ಲಿ  ನಡೆದಿದೆ.

- Advertisement -

ಅತ್ತೆ ಮೀರಾ ಗಾಯಕ್ ವಾಡ್ (55), ಸೊಸೆ ಅಪೇಕ್ಷಾ (30), ಮೊಮ್ಮಕ್ಕಳಾದ ಮಯೂರೇಶ್ (15), ಮೋಕ್ಷಾ (15) ಹಾಗೂ ಸಂಬಂಧಿ ನಿಲೇಶ್ ಗಾಯಕ್ ವಾಡ್ (15) ಮೃತಪಟ್ಟವರು.

ಮೀರಾ ಗಾಯಕ್ ವಾಡ್ ಅವರು  ಸೊಸೆಯ ಜೊತೆ ಬಟ್ಟೆ ತೊಳೆಯಲು ಕ್ವಾರಿಗೆ ತೆರಳಿದ್ದರು. ಇಬ್ಬರು ಮಕ್ಕಳು ಮತ್ತು ಓರ್ವ ಸಂಬಂಧಿ ಬಾಲಕ ಕೂಡಾ ಜೊತೆಗಿದ್ದರು. ಈ ಸಂದರ್ಭದಲ್ಲಿ ದಂಡೆಯ ಮೇಲೆ ಕುಳಿತಿದ್ದ ಬಾಲಕನೋರ್ವ ಆಯತಪ್ಪಿ ನೀರಿಗೆ ಬಿದ್ದಿದ್ದಾನೆ. ಆತನನ್ನು ರಕ್ಷಿಸಲು ಇನ್ನುಳಿದ ನಾಲ್ವರೂ ನೀರಿಗೆ ಜಿಗಿದಿದ್ದಾರೆ. ದುರದೃಷ್ಟವಶಾತ್ ಐವರೂ ನೀರಲ್ಲಿ ಮುಳುಗಿ ಅಸುನೀಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

  ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಶವಗಳನ್ನು ಮೇಲೆತ್ತಿದ್ದು ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.



Join Whatsapp