ಅಧಿಕೃತ ನಿವಾಸ ತೊರೆದ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ

Prasthutha|

ಮುಂಬೈ: ಮಹಾರಾಷ್ಟ್ರದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟು ದಿನದಿಂದ ದಿನಕ್ಕೆ ಉಲ್ಬಣಿಸುತ್ತಿದೆ. ಬಂಡಾಯ ಶಾಸಕರು ಗುಜರಾತ್’ಗೆ ಪಾಲಯಾನಗೈದಿರುವ ಬೆನ್ನಲ್ಲೇ ಸಿಎಂ ಉದ್ಧವ್ ಠಾಕ್ರೆ, ಸಿಎಂ ಅಧಿಕೃತ ನಿವಾಸ ‘ವರ್ಷಾ’ ತೊರೆದು, ಖಾಸಗಿ ನಿವಾಸ ‘ಮಾತೋಶ್ರಿ’ಗೆ ತೆರಳಿದ್ದಾರೆ.

- Advertisement -

ಉದ್ಧವ್ ತನ್ನ ಪತ್ನಿ, ಮಕ್ಕಳಾದ ಆದಿತ್ಯ ಠಾಕ್ರೆ ಹಾಗೂ ತೇಜಸ್ ಅವರೊಂದಿಗೆ ಅಧಿಕೃತ ನಿವಾಸ ತೊರೆದಿದ್ದಾರೆ. ಇನ್ನು ಠಾಕ್ರೆ ಅಧಿಕೃತ ನಿವಾಸದಿಂದ ಹೊರಬರುತ್ತಿರುತ್ತಿದ್ದಂತೆ ಮನೆ ಮುಂಭಾಗ ಜಮಾಯಿಸಿದ್ದ ಭಾರೀ ಸಂಖ್ಯೆಯ ಶಿವಸೇನೆ ಕಾರ್ಯಕರ್ತರು ಠಾಕ್ರೆ ಪರವಾಗಿ ಘೋಷಣೆಗಳನ್ನೂ ಕೂಗಿದ್ದಾರೆ.

ಅದಾಗ್ಯೂ, ರಾಜೀನಾಮೆ ನೀಡಲು ನಾನು ಸಿದ್ಧನಿದ್ದೇನೆ ಎಂದು ಉದ್ಧವ್ ಬುಧವಾರ ನಡೆದ ಸಭೆಯಲ್ಲಿ ಹೇಳಿದ್ದರೂ, ಮಹಾವಿಕಾಸ್ ಅಘಾಡಿ ಸರ್ಕಾರದ ಇತರ ಮೈತ್ರಿ ಪಕ್ಷಗಳಾದ ಎನ್ಸಿಪಿ ಮತ್ತು ಕಾಂಗ್ರೆಸ್ನ ಇತರ ನಾಯಕರು ‘ಸರ್ಕಾರಕ್ಕೆ ಯಾವುದೇ ಆತಂಕವಿಲ್ಲ. ಹೀಗಾಗಿ ರಾಜೀನಾಮೆ ಕೊಡುವ ಅಗತ್ಯವಿಲ್ಲ’ ಎಂದು ಹೇಳಿದೆ.



Join Whatsapp