ಪ್ರಿಯಾಂಕ್‌ ಖರ್ಗೆ ವಿರುದ್ಧ ಮಹಾರಾಷ್ಟ್ರ ಬಿಜೆಪಿ ಶಾಸಕರ ಧರಣಿ

Prasthutha|

ನಾಗಪುರ: ಅನುಮತಿ ದೊರೆತರೆ ವಿ.ಡಿ. ಸಾವರ್ಕರ್‌ ಭಾವಚಿತ್ರವನ್ನು ಕರ್ನಾಟಕ ವಿಧಾನಸಭೆಯಿಂದ ತೆರವುಗೊಳಿಸುತ್ತೇನೆ ಎಂದು ಹೇಳಿದ ಕರ್ನಾಟಕ ಸಚಿವ ಪ್ರಿಯಾಂಕ್‌ ಖರ್ಗೆ ನೀಡಿದ ಹೇಳಿಕೆಯನ್ನು ಖಂಡಿಸಿ ಮಹಾರಾಷ್ಟ್ರ ಬಿಜೆಪಿ ಶಾಸಕರು ರಾಜ್ಯ ವಿಧಾನಸಭೆಯ ಹೊರಗೆ ಪ್ರತಿಭಟನೆ ನಡೆಸಿದ್ದಾರೆ.

- Advertisement -

ವಿಧಾನಸಭೆ ಮೆಟ್ಟಿಲುಗಳ ಮೇಲೆ ಜಮಾಯಿಸಿದ ಹಲವು ಬಿಜೆಪಿ ಶಾಸಕರು, ಪ್ರಿಯಾಂಕ್‌ ಖರ್ಗೆ ವಿರುದ್ಧ ಘೋಷಣೆ ಕೂಗಿದ್ದಾರೆ. ಈ ಹೇಳಿಕೆ ಸಂಬಂಧಿಸಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮತ್ತು ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್‌ ಠಾಕ್ರೆ ಪ್ರತಿಕ್ರಿಯೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ

ನನ್ನ ವೈಯಕ್ತಿಕ ಅಭಿಪ್ರಾಯದ ಪ್ರಕಾರ ಸಾವರ್ಕರ್‌ ಭಾವಿಚಿತ್ರವನ್ನು ವಿಧಾನಸಭೆಯಿಂದ ತೆರವುಗೊಳಿಸುವುದು ಸೂಕ್ತವಾಗಿದೆ. ಅನುಮತಿ ನೀಡಿದರೆ ತೆರವುಗೊಳಿಸುತ್ತೇನೆ ಎಂದು ಪ್ರಿಯಾಂಕ್‌ ಖರ್ಗೆ ಗುರುವಾರ ಹೇಳಿದ್ದರಲ್ಲದೆ, ಸಾವರ್ಕರ್‌ ಬಗೆಗಿನ ನನ್ನ ಪ್ರಶ್ನೆಗಳಿಗೆ ಬಿಜೆಪಿಗರು ಉತ್ತರಿಸಿದ ನಂತರ ಸಾವರ್ಕರ್ ಚಿತ್ರವನ್ನು ವಿಧಾನಸಭೆಯಲ್ಲಿ ಹಾಕಲಿ ಎಂದೂ ಸವಾಲೆಸೆದಿದ್ದರು.



Join Whatsapp