ಮಹಾರಾಷ್ಟ್ರ: ಸರಕು ಸಾಗಣೆ ರೈಲಿನ 20 ಕಲ್ಲಿದ್ದಲು ಬೋಗಿಗಳು ಹಳಿ ತಪ್ಪಿದ ಪರಿಣಾಮ ರೈಲು ಸಂಚಾರದಲ್ಲಿ ವ್ಯತ್ಯಯ

Prasthutha|

ಮುಂಬೈ: ಮಹಾರಾಷ್ಟ್ರದ ನಾಗ್ಪುರ ವಿಭಾಗದ ವಾರ್ಧಾ-ಬದ್ನೇರಾ ವಿಭಾಗದ ಮಲ್ಖೇಡ್ ಮತ್ತು ತಿಮಾಟ್ಲಾ ನಿಲ್ದಾಣಗಳ ನಡುವೆ ಭಾನುವಾರ ತಡರಾತ್ರಿ ಸರಕು ಸಾಗಣೆ ರೈಲಿನ 20 ಕಲ್ಲಿದ್ದಲು ಬೋಗಿಗಳು ಹಳಿ ತಪ್ಪಿದ್ದು, ಆ ಮಾರ್ಗದ ರೈಲು ಸಂಚಾರಕ್ಕೆ ತೀವ್ರ ಅಡಚಣೆಯುಂಟಾಗಿದೆ.

- Advertisement -

ಹಳಿ ತಪ್ಪಿದ ಪರಿಣಾಮ, ಅನೇಕ ರೈಲುಗಳನ್ನು ರದ್ದುಗೊಳಿಸಲಾಗಿದೆ. ಕೆಲ ರೈಲುಗಳನ್ನು ಅಲ್ಪಾವಧಿಗೆ ತಡೆಹಿಡಿಯಲಾಗಿದ್ದು, ಇನ್ನೂ ಕೆಲವನ್ನು ಬೇರೆಡೆಗೆ ತಿರುಗಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಯಾವುದೇ ಪ್ರಾಣಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ.

11122 ವಾರ್ಧಾ-ಭೂಸಾವಲ್, 12140 ನಾಗ್ಪುರ-ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್, 12119 ಅಮರಾವತಿ-ನಾಗ್ಪುರ, 11040 ಗೊಂಡಿಯಾ-ಕೊಲ್ಹಾಪುರ, 01372 ವಾರ್ಧಾ-ಅಮರ-ಅಮರಾವತಿ, 17642 ನಾರ್ಖೇರ್-ಕಾಚಿಗುಡ, 11121 ಭೂಸಾವಲ್-ವಾರ್ಧಾ, 12106 ಗೊಂಡಿಯಾ-ಜಿಎಸ್ಎಂಟಿ, 12136 ನಾಗ್ಪುರ-ಪುಣೆ, 12120 ಅಜ್ನಿ-ಅಮರಾವತಿ, 12140 ನಾಗ್ಪುರ-ಜಿಎಸ್ಎಂಟಿ ಮತ್ತು 01374 ನಾಗ್ಪುರ-ವಾರ್ಧಾ ರೈಲುಗಳ ಸಂಚಾರದಲ್ಲಿ ಅಡಚಣೆ ಉಂಟಾಗಿದೆ.

- Advertisement -

ಚಂದೂರ್ ಬಜಾರ್-ನಾರ್ಖೇರ್ ಮೂಲಕ ಪುಣೆ-ಹಟಿಯಾ, ಸಿಎಸ್ಎಂಟಿ-ಹೌರಾ ಮತ್ತು ಸಿಎಸ್ಎಂಟಿ-ನಾಗ್ಪುರ್ ರೈಲುಗಳನ್ನು ತಿರುಗಿಸಲಾಗಿದೆ.

ನಾಗ್ಪುರ್-ನರ್ಖೇರ್-ಚಂದೂರ್ ಬಜಾರ್-ಬದ್ನೇರಾ ಮೂಲಕ ವಿಶಾಖಪಟ್ಟಣ ಮತ್ತು ಚೆನ್ನೈ-ಅಹಮದಾಬಾದ್ ಮೂಲಕ ರೈಲುಗಳನ್ನು ತಿರುಗಿಸಲಾಗಿದೆ ಎಂದು ಕೇಂದ್ರ ರೈಲ್ವೆ ನಾಗ್ಪುರ ವಿಭಾಗ ಮಾಹಿತಿ ನೀಡಿದೆ.



Join Whatsapp