ಮದರಸಾ ಬೋಧಕರು ಸ್ಥಳೀಯ ಠಾಣೆಯಲ್ಲಿ ಹಾಜರಿ ಸಲ್ಲಿಸಬೇಕು: ಹಿಮಂತ್ ಬಿಸ್ವಾ ಶರ್ಮಾ

Prasthutha|

ಗುವಾಹಟಿ: ಅಸ್ಸಾಂನ ಮದರಸಾಗಳಲ್ಲಿ ಬೋಧಿಸಲು ಬರುವ ಅನ್ಯ ರಾಜ್ಯದವರು ಸ್ಥಳೀಯ ಪೊಲೀಸ್ ಠಾಣೆಗೆ ಬಂದು ಹಾಜರಿ ಸಲ್ಲಿಸಿ ಹೋಗಬೇಕು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಹೇಳಿದ್ದಾರೆ.

- Advertisement -


ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮದರಸಾಗಳಲ್ಲಿ ಕೆಲಸ ಮಾಡುವವರ ಚೆಕ್‌ಲಿಸ್ಟ್ ತಯಾರಿಸುವ ಕಾರ್ಯ ಪ್ರಗತಿಯಲ್ಲಿದೆ. ಮದರಾಸಗಳ ವಿಷಯದಲ್ಲಿ ನಮ್ಮ ಸರ್ಕಾರ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದರು.


ಅಸ್ಸಾಂನಲ್ಲಿ ನೋಂದಣಿಯಾಗಿರುವ ಮತ್ತು ನೋಂದಣಿಯಾಗದಿರುವ ಸುಮಾರು 3,000 ಮದರಸಾಗಳು ಇವೆ. ಇವುಗಳ ಮೇಲೆ ನಮ್ಮ ಪೊಲೀಸರು ಹದ್ದಿನ ಕಣ್ಣಿಡಲಿದ್ದಾರೆ. ಮುಸ್ಲಿಮರ ವಿಚಾರದಲ್ಲಿ ನಮ್ಮ ಪೊಲೀಸರು ಉತ್ತಮವಾಗಿ ವರ್ತಿಸಲಿದ್ದಾರೆ ಎಂದು ಶರ್ಮಾ ಹೇಳಿದರು.

- Advertisement -


ಉತ್ತಮ ಶೈಕ್ಷಣಿಕ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಮುಂದೆ ಬರುವ ಮುಸ್ಲಿಮರ ಜೊತೆ ನಾವು ಕೂಡ ಉತ್ತಮವಾಗಿ ಕೆಲಸ ಮಾಡಲಿದ್ದೇವೆ. ಮದರಸಾಗಳಲ್ಲಿ ಇರುವವರು ನಮ್ಮ ವೈರಿಗಳಲ್ಲ. ಆದರೆ, ಅಲ್ಲಿನ ಬೆಳವಣಿಗೆಗಳು ಸರಿಯಾಗಿ ನಡೆಯುತ್ತಿವೆಯೇ ಎಂಬುದನ್ನು ಗಮನಿಸುವುದು ನಮ್ಮ ಕರ್ತವ್ಯ ಎಂದು ಹಿಮಂತ್ ಬಿಸ್ವಾ ಶರ್ಮಾ ಹೇಳಿದ್ದಾರೆ.


ಇತ್ತೀಚೆಗೆ ಪೊಲೀಸರು ತಪಾಸಣೆ ಮಾಡಿದಾಗ ಅಸ್ಸಾಂನ ಕೆಲ ಮದರಸಾಗಳಲ್ಲಿ 71 ಜನ ಬಾಂಗ್ಲಾದೇಶಿಯರು ಪತ್ತೆಯಾಗಿದ್ದರು. ಈ ಘಟನೆಯ ಬಳಿಕ ಅಸ್ಸಾಂ ಸರ್ಕಾರ ಮದರಸಾಗಳ ಮೇಲೆ ನಿಗಾ ಇಡಲು ಮುಂದಾಗಿದೆ.

Join Whatsapp