ಕಾಸರಗೋಡು | ಸ್ಕೋಡಾ ಕಂಪನಿಯ ನೂತನ ಕಾರಿಗೆ ಹೆಸರು ಸೂಚಿಸಿ ಕಾರು ಗೆದ್ದ ಮದ್ರಸಾ ಶಿಕ್ಷಕ

Prasthutha|

ಕಾಸರಗೋಡು: ಸ್ಕೋಡಾ ಕಾರು ಕಂಪೆನಿಯು ಹೊರತರಲಿರುವ ನೂತನ ಎಸ್ಯುವಿ ಕಾರಿಗೆ ಹೆಸರು ಸೂಚಿಸಿ ಗೆಲ್ಲುವ ಮೂಲಕ ಅದೇ ಕಾರನ್ನು ತನ್ನದಾಗಿಸುವ ಅವಕಾಶವನ್ನು ಕಾಸರಗೋಡು ನಿವಾಸಿ ಮದ್ರಸಾ ಶಿಕ್ಷಕರೊಬ್ಬರು ಪಡೆದಿದ್ದಾರೆ.

- Advertisement -


ಕಾಸರಗೋಡು ಜಿಲ್ಲೆಯ ನಾಯ್ಮಾರ್ಮೂಲೆಯ ಹಾಫಿಲ್ ಮುಹಮ್ಮದ್ ಝಿಯಾದ್ ಮರ್ಜಾನಿ ಅಲ್-ಯಮಾನಿ ಹೆಸರು ಸೂಚಿಸಿ ಕಾರು ಗೆದ್ದ ಕುರಾನ್ ಶಿಕ್ಷಕ.


ಸ್ಕೋಡಾ ಕಂಪೆನಿಯು ಸೋಶಿಯಲ್ ಮೀಡಿಯಾದಲ್ಲಿ ‘ನೇಮ್ ಯುವರ್ ಸ್ಕೋಡಾ’ ಎಂಬ ಅಭಿಯಾನದ ಮೂಲಕ 2025ರಲ್ಲಿ ಹೊರತರಲಿರುವ ನೂತನ ಕಾರಿಗೆ ಹೆಸರನ್ನು ಆಹ್ವಾನಿಸಿತ್ತು.
‘K’ಯಿಂದ ಆರಂಭಗೊಂಡು ‘Q’ನಲ್ಲಿ ಕೊನೆಗೊಳ್ಳುವ ಹೆಸರನ್ನು ಕಂಪನಿ ಕೇಳಿಕೊಂಡಿತ್ತು. ಇದಕ್ಕೆ ಮುಹಮ್ಮದ್ ಝಿಯಾದ್ KYLAQ ಎಂಬ ಹೆಸರನ್ನು ಸೂಚಿಸಿದ್ದರು.

- Advertisement -


ವಿಶ್ವದಾದ್ಯಂತದಿಂದ ಸುಮಾರು ಎರಡು ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದ ಈ ಆನ್ಲೈನ್ ಸ್ಪರ್ಧೆಯಲ್ಲಿ ಮುಹಮ್ಮದ್ ಝಿಯಾದ್ ಹೆಸರು ಆಯ್ಕೆಯಾಗುವ ಮೂಲಕ ಕಂಪೆನಿಯ ಸ್ಕೋಡಾ ಕೈಲಾಕ್ನ ಮೊದಲ ಕಾರನ್ನು ತನ್ನದಾಗಿಸಿಕೊಳ್ಳಲಿದ್ದಾರೆ.



Join Whatsapp