ಧರ್ಮದ ಹಕ್ಕು ಜೀವನದ ಹಕ್ಕಿಗಿಂತ ದೊಡ್ಡದಲ್ಲ : ಮದ್ರಾಸ್ ಹೈಕೋರ್ಟ್

Prasthutha|

ಚೆನ್ನೈ : ಧರ್ಮದ ಹಕ್ಕು, ಜೀವನದ ಹಕ್ಕಿಗಿಂತ ದೊಡ್ಡದಲ್ಲ ಎಂದು ಮದ್ರಾಸ್ ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ. ಕೋವಿಡ್ 19 ಮಾರ್ಗಸೂಚಿಗಳಿಗೆ ಧಕ್ಕೆಯಾಗದಂತೆ ತಮಿಳುನಾಡಿನ ದೇವಸ್ಥಾನವೊಂದರಲ್ಲಿ ಆಚರಣೆಗಳನ್ನು ನಡೆಸುವ ಸಾಧ್ಯತೆಯನ್ನು ಪರಿಶೀಲಿಸಲು ಕೋರ್ಟ್ ತಮಿಳುನಾಡು ಸರಕಾರಕ್ಕೆ ನಿರ್ದೇಶಿಸಿದೆ.

- Advertisement -

ಪಿಐಎಲ್ ಒಂದನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ಸಂಜೀಬ್ ಬ್ಯಾನರ್ಜಿ ಅವರಿದ್ದ ನ್ಯಾಯಪೀಠ, ಧಾರ್ಮಿಕ ವಿಧಿಗಳು ಸಾರ್ವಜನಿಕ ಹಿತಾಸಕ್ತಿ ಮತ್ತು ಜೀವನದ ಹಕ್ಕಿಗೆ ಒಳಪಟ್ಟಿರಬೇಕು ಎಂದು ಮೌಖಿಕವಾಗಿ ಹೇಳಿದೆ.  

ಧರ್ಮದ ಹಕ್ಕು ಜೀವನದ ಹಕ್ಕಿಗಿಂತ ದೊಡ್ಡದಲ್ಲ. ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ಸರ್ಕಾರ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕಾದರೆ, ನಾವು ಮಧ್ಯಪ್ರವೇಶಿಸಲು ಪ್ರಯತ್ನಿಸುವುದಿಲ್ಲ ಎಂದು ಸಿಜೆ ಬ್ಯಾನರ್ಜಿ ಹೇಳಿದ್ದಾರೆ.



Join Whatsapp