ಮಡಿಕೇರಿ| ದ್ವಿಚಕ್ರ ವಾಹನ ಡಿಕ್ಕಿ; ಮಗು ಮೃತ್ಯು

Prasthutha|

ಮಡಿಕೇರಿ: ದ್ವಿಚಕ್ರ ವಾಹನ ಡಿಕ್ಕಿಯಾಗಿ 5 ವರ್ಷದ ಮಗುವೊಂದು ಸ್ಥಳದಲ್ಲೇ ಮೃತಪಟ್ಟ ಘಟನೆ ಮಡಿಕೇರಿ ಬಳಿಯ ಮೇಕೇರಿ ಗ್ರಾಮದಲ್ಲಿ ನಡೆದಿದೆ.


ಅಸ್ಸಾಮ್ ಮೂಲದ ಅಸ್ಮಾ ಹಾಗೂ ಇದ್ರಿಸ್ ಅಲಿ ದಂಪತಿ ಪುತ್ರಿ ಅಲಿಝಾ (5) ಮೃತ ಬಾಲಕಿ. ಮೃತ ಮಗುವಿನ ಪೋಷಕರು ಮೇಕೇರಿ ಗ್ರಾಮದ ಧಣೇಶ್ ಎಂಬವರ ತೋಟದ ಮನೆಯಲ್ಲಿ ಕಳೆದ ಮೂರು ತಿಂಗಳಿನಿಂದ ವಾಸವಿದ್ದಾರೆ.

- Advertisement -


ಮಂಗಳವಾರ ಸಂಜೆ 6ಗಂಟೆ ವೇಳೆಗೆ ರಸ್ತೆ ಬದಿ ಆಟವಾಡುತ್ತಿದ್ದ ವೇಳೆ ವಿರಾಜಪೇಟೆ ಮೂರ್ನಾಡು ಕಡೆಯಿಂದ ಬಂದ ದ್ವಿ ಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ.


ಬೈಕ್ ಸವಾರ ಮೂರ್ನಾಡು ಗ್ರಾಮದ ಸಚಿನ್ ಎಂದು ಗುರುತಿಸಲಾಗಿದೆ. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಗುವಿನ ಮೃತದೇಹವಿರುವ ಮಡಿಕೇರಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಪೊಲೀಸ್ ಉಪವರಿಷ್ಠಾಧಿಕಾರಿ ಗಜೇಂದ್ರ ಪ್ರಸಾದ್ ಮಾಹಿತಿ ಸಂಗ್ರಹಿಸಿದ್ದಾರೆ.

- Advertisement -