ಮಡಿಕೇರಿ: ಬೀದಿ ವ್ಯಾಪಾರಿಯ ಮೇಲೆ ಪೋಲಿಸ್ ದೌರ್ಜನ್ಯ
Prasthutha: December 30, 2021

ಮಡಿಕೇರಿ: ಮಾಸ್ಕ್ ಧರಿಸಿಲ್ಲ ಎಂಬ ಆರೋಪದ ಮೇಲೆ ಬೀದಿ ಬದಿ ವ್ಯಾಪಾರಿಯೊಬ್ಬರ ಮೇಲೆ ಪೊಲೀಸರು ದೌರ್ಜನ್ಯವೆಸಗಿ ಆತನ ಅಂಗಡಿಯನ್ನೇ ಎತ್ತಂಗಡಿ ಮಾಡಿರುವ ಅಮಾನವೀಯ ಘಟನೆ ಮಡಿಕೇರಿಯಲ್ಲಿ ಗುರುವಾರ ನಡೆದಿದೆ.
ಮಡಿಕೇರಿಯ ಬೀದಿ ಬದಿ ವ್ಯಾಪಾರಿ ಫೈಝಲ್ ಅವರು ಎಂದಿನಂತೆ ಗುರುವಾರ ಹಣ್ಣು ವ್ಯಾಪಾರ ಮಾಡುತ್ತಿದ್ದರು. ಮಡಿಕೇರಿ ಸರ್ಕಲ್ ಇನ್ಸ್ ಪೆಕ್ಟರ್ ಅವರು ನಗರ ಠಾಣೆ ಕಡೆ ಹೋಗುತ್ತಿದ್ದಾಗ ಪೈಝಲ್ ಮಾಸ್ಕ್ ಧರಿಸದ್ದನ್ನು ನೋಡಿ ಗದರಿಸಿದ್ದಾರೆ. ಮಾತ್ರವಲ್ಲ ದಂಡವನ್ನೂ ಹಾಕಿದ್ದಾರೆ. ಎಷ್ಟೇ ಮನವಿ ಮಾಡಿದರೂ ಪೊಲೀಸರು ಕೇಳಲಿಲ್ಲ.
ದಂಡ ಕಟ್ಟಿದ ಬಳಿಕ ಅಂಗಡಿಯನ್ನು ಆ ಸ್ಥಳದಿಂದ ಪೊಲೀಸರು ಬಲವಂತವಾಗಿ ತೆರವುಗೊಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಫೈಝಲ್, ದಂಡ ಕಟ್ಟಿದ್ದರೂ ಬೇರೆ ಪ್ರಕರಣದಲ್ಲಿ ಜೈಲಿಗೆ ಹಾಕುತ್ತೇನೆ ಎಂದು ಪೊಲೀಸರು ಬೆದರಿಸಿದ್ದಾರೆ ಎಂದು ಆರೋಪಿಸಿದರು.
