ಮಡಿಕೇರಿ: ಸಾವಿತ್ರಿ ಬಾಯಿಪುಲೆ ಗ್ರಂಥಾಲಯ ಉದ್ಘಾಟನೆ

Prasthutha|

ಮಡಿಕೇರಿ: ಭಾರತದ ಮೊದಲ ಮಹಿಳಾ ಶಿಕ್ಷಕಿ, ಅಕ್ಷರ ಮಾತೆ ಸಾವಿತ್ರಿ ಬಾಯಿ ಪುಲೆ ಅವರ ಹೆಸರಿನ ಗ್ರಂಥಾಲಯವನ್ನು ಲೋಕಾರ್ಪಣೆಗೊಳಿಸಿದರು.

- Advertisement -

ಚಿತ್ರನಟ ವಿನಯ್ ರಾಘವೇಂದ್ರ ರಾಜ್ ಕುಮಾರ್ ಹಾಗೂ ಪ್ರಮುಖರಾದ ಭೀಮಯ್ಯ ಮಾಸ್ಟರ್ ಗ್ರಂಥಾಲಯವನ್ನು ಉದ್ಘಾಟಿಸಿ ಶುಭ ಕೋರಿದರು.

ಕಾನ್ಶಿರಾಂ ನಗರದ ಸ್ಥಾಪನೆಗೆ ಕಾರಣಕರ್ತರಾದ ಹೋರಾಟಗಾರ ಕೆ.ಮೊಣ್ಣಪ್ಪ ಮಾತನಾಡಿ ನಿರಂತರ ಹೋರಾಟದ ಫಲವಾಗಿ ಬಡವರು ಹಾಗೂ ಕಾರ್ಮಿಕರಿಗೆ ಕಾನ್ಶಿರಾಂ ನಗರದ ಸೂರು ದೊರೆತ್ತಿದೆ ಎಂದರು.

- Advertisement -

ಪ್ರತಿಯೊಬ್ಬರು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಮತ್ತು ಶೈಕ್ಷಣಿಕವಾಗಿ ಪ್ರಗತಿಯನ್ನು ಸಾಧಿಸಬೇಕು ಎನ್ನುವ ಉದ್ದೇಶದಿಂದ 15 ನೇ ವರ್ಷದ ಸಂಭ್ರಮದ ಹಿನ್ನೆಲೆ ಗ್ರಂಥಾಲಯವನ್ನು ಉದ್ಘಾಟಿಸಲಾಗಿದೆ. ಚಿತ್ರರಂಗದ ದೊಡ್ಡಮನೆಯ ಕುಟುಂಬದ ವಿನಯ್ ರಾಘವೇಂದ್ರ ರಾಜ್ ಕುಮಾರ್ ಅವರು ಗ್ರಂಥಾಲಯಯ ನಿರ್ಮಾಣಕ್ಕೆ ಸಾಕಷ್ಟು ಸಹಕಾರ ನೀಡಿದ್ದಾರೆ ಎಂದು ಸ್ಮರಿಸಿಕೊಂಡರು. ಗ್ರಂಥಾಲಯದಲ್ಲಿ ನಾಲ್ಕು ಸಾವಿರಕ್ಕೂ ಅಧಿಕ ಪುಸ್ತಕಗಳಿದ್ದು, ಇದು ನಮ್ಮ ಮಕ್ಕಳ ಬಾಳನ್ನು ಬೆಳಗಲಿದೆ ಎಂದು ಮೊಣ್ಣಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಹಿರಿಯರಾದ ಭೀಮಯ್ಯ ಮಾಸ್ಟರ್, ನಟ ವಿನಯ್ ರಾಜ್ ಕುಮಾರ್, ಕಾನ್ಸಿರಾಮ್ ನಗರದ ಸ್ಥಾಪಕ ಮೊಣ್ಣಪ್ಪ, ಭೂಮಿ ಮತ್ತು ವಸತಿ ಹೋರಾಟ ಸಮಿತಿಯ ಅಧ್ಯಕ್ಷ ಅಮೀನ್ ಮೊಹಿಸಿನ್, ವಕೀಲ ರಂಜು, ಕಾಟಿಕೇರಿ ಶಾಲೆಯ ಪ್ರಾಂಶುಪಾಲ ರಾಘವೇಂದ್ರ, ಅಭಿವೃದ್ಧಿ ಅಧಿಕಾರಿ ಅಬ್ದುಲ್ಲ ಸೇರಿದಂತೆ ಹಲವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಗ್ರಾ.ಪಂ ಉಪಾಧ್ಯಕ್ಷರಾದ ಸರಸು, ಸದಸ್ಯರಾದ ಹಮೀದ್, ಮೊಯ್ದು, ಚೌರಿರ ಅನಿತ, ನವೀನ್, ಮುಖ್ಯ ಶಿಕ್ಷಕಿ ದಮಯಂತಿ, ಶಿಕ್ಷಕರಾದ ಕವಿತಾ, ಕಸ್ತೂರಿ, ಸೌಮ್ಯ, ಕುಮಾರ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.



Join Whatsapp