ಮಡಿಕೇರಿ: ಲಾರಿಯಿಂದ ಸೋರಿಕೆಯಾಗಿದ್ದು ಕೆಮಿಕಲ್ ಅಲ್ಲ, ಪೆಪ್ಪರ್ ಸಾಸ್ ಎಂದ ಪೊಲೀಸರು

Prasthutha|

ಮಡಿಕೇರಿ: ಕುಶಾಲನಗರ ಮಾರ್ಗವಾಗಿ ಕೇರಳಕ್ಕೆ ತೆರಳುವ ರಸ್ತೆಯಲ್ಲಿ ಸೋರಿಕೆಯಾಗಿರುವುದು ಕೆಮಿಕಲ್ ಅಲ್ಲ, ಅದು ಪೆಪ್ಪರ್ ಸಾಸ್ ಎಂಬುದು ದೃಢಪಟ್ಟಿದೆ.
ಲಾರಿಯಿಂದ ಸೋರಿಕೆಯಾಗಿದ್ದು ಕೆಮಿಕಲ್ ಅಲ್ಲ, ಪೆಪ್ಪರ್ ಸಾಸ್ ಎಂಬುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

- Advertisement -

ಕುಶಾಲನಗರದಿಂದ ಕೇರಳಕ್ಕೆ ಟ್ಯಾಂಕರ್ ನಲ್ಲಿ ಮೆಣಸಿನ ಸಾಸ್ ಸಾಗಿಸಲಾಗುತ್ತಿತ್ತು. ಈ ಲಾರಿಯಿಂದ ಸೋರಿಕೆ ಉಂಟಾಗಿ ಈ ಅವಘಡ ಸಂಭವಿಸಿದೆ. ಟ್ಯಾಂಕರ್ ಅನ್ನು ಮಾಕುಟ್ಟದಲ್ಲಿ ತಪಾಸಣೆ ನಡೆಸಿ ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಅದರಲ್ಲಿ ಇರುವುದು ರಾಸಾಯನಿಕ ಅಲ್ಲ, ಅದು ಪೆಪ್ಪರ್ ಸಾಸ್ ಎಂಬುದು ಸಾಬೀತಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಟ್ಯಾಂಕರ್ ಗೆ ಕಲ್ಲು ತಾಗಿ ಸೋರಿಕೆಯಾಗಿರಬಹುದು ಎಂದು ಶಂಕಿಸಲಾಗಿದೆ.

- Advertisement -

ಸೋರಿಕೆಯಾಗಿರುವ ರಸ್ತೆಯನ್ನು ವಿರಾಜಪೇಟೆ ಪಟ್ಟಣ ಪಂಚಾಯತ್ ಸಿಬ್ಬಂದಿ ನೀರಿನಿಂದ ಶುಚಿಗೊಳಿಸುವ ಕಾರ್ಯ ಆರಂಭಿಸಿದ್ದಾರೆ.

ಈ ಪ್ರದೇಶದ ಜನರಲ್ಲಿ ಬೆಳ್ಳಂಬೆಳಗ್ಗೆ ಕೆಮ್ಮು,ಕಣ್ಣು ಉರಿ, ಗಂಟಲು ಕೆರೆತ ಲಕ್ಷಣಗಳು ಕಂಡುಬಂದಿದ್ದವು. ಕೆಮಿಕಲ್ ಸೋರಿಕೆಯಿಂದ ಇದು ಉಂಟಾಗಿದೆ ಎಂಬ ಆತಂಕ ಉಂಟಾಗಿತ್ತು.



Join Whatsapp