ಕೊಡಗು: ಜಿಲ್ಲಾಡಳಿತ ಭವನ ಬಳಿ ಮಂಗಳೂರು ರಸ್ತೆಯ ತಡೆಗೋಡೆಯನ್ನು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಮತ್ತು ಕೆ.ಜಿ.ಬೋಪಯ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್, ಕಾಮಗಾರಿ ಆರಂಭದ ಸಂದರ್ಭದಲ್ಲಿ ಕಾಂಕ್ರೀಟ್ ತಡೆಗೋಡೆ ನಿರ್ಮಿಸುವಂತೆ ಎಂಜಿನಿಯರ್ಗಳಿಗೆ ಸೂಚಿಸಲಾಗಿತ್ತು, ಆದರೆ ದೆಹಲಿಯಿಂದ ವಿನ್ಯಾಸಕರನ್ನು ಕರೆಸಿ ಸ್ಲ್ಯಾಬ್ ಮಾದರಿಯಲ್ಲಿ ತಡೆಗೋಡೆ ಮಾಡಿದ್ದಾರೆ. ಸ್ಲ್ಯಾಬ್ ಮಾದರಿಯ ತಡೆಗೋಡೆ ಕೊಡಗು ಜಿಲ್ಲೆಯ ಮಣ್ಣಿಗೆ ಸರಿ ಬರುವುದಿಲ್ಲ. ಈ ಬಗ್ಗೆ ಸಾಕಷ್ಟು ಬಾರಿ ಎಂಜಿನಿಯರ್ ಗಳಿಗೆ ತಿಳಿಸಿದರೂ ಸಹ ಕಿವಿಗೊಡಲಿಲ್ಲ ಎಂದರು.
ಕೊಡಗು ಜಿಲ್ಲೆಯಲ್ಲಿನ ಮಳೆಯ ವಾತಾವರಣ ನೋಡಿ ಸ್ಥಳೀಯ ಮಾದರಿಯಲ್ಲಿ ತಡೆಗೋಡೆ ನಿರ್ಮಿಸಬೇಕಿತ್ತು, ಸ್ಲ್ಯಾಬ್ ಮಾದರಿ ತಡೆಗೋಡೆಯನ್ನು ಎತ್ತರಕ್ಕೆ ನಿರ್ಮಿಸಿರುವುದರಿಂದ ಕುಸಿಯುವ ಹಂತ ತಲುಪಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಈ ರೀತಿ ಆದಲ್ಲಿ ಸಾರ್ವಜನಿಕರು ಓಡಾಡುವುದು ಹೇಗೆ ಎಂದು ಎಂಜಿನಿಯರ್ ಗಳನ್ನು ಸ್ಥಳದಲ್ಲಿಯೇ ತರಾಟೆಗೆ ತೆಗೆದುಕೊಂಡರು. ಜನಪ್ರತಿನಿಧಿಗಳಿಗೆ ಕೆಟ್ಟ ಹೆಸರು ತರಲು ಈ ರೀತಿಯ ಕೆಲಸಗಳನ್ನು ಮಾಡುತ್ತಾರೆ ಎಂದರು.
ಎರಡು ದಿನದಲ್ಲಿ ತಡೆಗೋಡೆಯನ್ನು ಸರಿಪಡಿಸಿ ಸಾರ್ವಜನಿಕರ ಓಡಾಟಕ್ಕೆ ಅನುಕೂಲ ಮಾಡಬೇಕು. ಇಲ್ಲದಿದ್ದಲ್ಲಿ ಸಂಬಂಧಪಟ್ಟವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಕ್ರಮವಹಿಸಬೇಕಾಗುತ್ತದೆ ಎಂದು ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಎಚ್ಚರಿಸಿದರು.’
ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಲೋಕೋಪಯೋಗಿ ಇಲಾಖೆಯ ಮುಖ್ಯ ಎಂಜಿನಿಯರ್ ಗೋವಿಂದರಾಜು, ಕಾರ್ಯಪಾಲಕ ಎಂಜಿನಿಯರ್ ನಾಗರಾಜು, ಜೂನಿಯರ್ ಎಂಜಿನಿಯರ್ಗಳಾದ ದೇವರಾಜು, ಸತೀಶ್, ಚೆನ್ನಕೇಶವ ಇತರರು ಇದ್ದರು. ದೆಹಲಿಯ ಅತಿಲ್ ಗೋಯಲ್ ಸಂಸ್ಥೆ ಅವರು ಸದ್ಯ ಮರಳು ಚೀಲವನ್ನು ತಡೆಗೋಡೆಗೆ ಅಳವಡಿಸುತ್ತಿದ್ದಾರೆ. 2 ದಿನದಲ್ಲಿ