ಮಡಿಕೇರಿ: ಬ್ಯಾನರ್ ಕಟ್ಟುತ್ತಿದ್ದ ಯುವಕ ವಿದ್ಯುತ್ ತಂತಿ ತಗುಲಿ ಮೃತ್ಯು

Prasthutha|

ಮಡಿಕೇರಿ: ಕ್ರಿಕೆಟ್ ಪಂದ್ಯಾವಳಿಯ ಬ್ಯಾನರ್ ಕಟ್ಟುತ್ತಿದ್ದ ಸಂದರ್ಭ ವಿದ್ಯುತ್ ತಂತಿ ತಗುಲಿ ಯುವಕನೋರ್ವ ಮೃತಪಟ್ಟ ಘಟನೆ ಮೂರ್ನಾಡು ಪಟ್ಟಣದಲ್ಲಿ ನಡೆದಿದೆ.

- Advertisement -


ಮೃತ ಯುವಕನನ್ನು ಮೂರ್ನಾಡು ನಿವಾಸಿ ಆರಿಫ್ (34) ಎಂದು ಗುರುತಿಸಲಾಗಿದೆ.


ಮೂರ್ನಾಡಿನಲ್ಲಿ ನಡೆಯಲಿರುವ ಕ್ರಿಕೆಟ್ ಪಂದ್ಯಾವಳಿಯೊಂದಕ್ಕೆ ಸಂಬಂಧಿಸಿ ಆರಿಫ್ ಸೇರಿದಂತೆ ಸಂಘಟಕ ಯುವಕರು ಶುಕ್ರವಾರ ರಾತ್ರಿ ಬ್ಯಾನರ್ ಕಟ್ಟುತ್ತಿದ್ದ ಸಂದರ್ಭ ಈ ಅವಘಡ ಸಂಭವಿಸಿದೆ.
ಈ ಕುರಿತು ಮೂರ್ನಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



Join Whatsapp