ಸೊಳ್ಳೆ ಕಚ್ಚಿದ್ದಕ್ಕೆ ಪಿಡಬ್ಲ್ಯುಡಿ ಇಂಜಿನಿಯರ್ ಸಸ್ಪೆಂಡ್ ಮಾಡಿದ ಮಧ್ಯಪ್ರದೇಶ ಸಿಎಂ

Prasthutha|

- Advertisement -

ಅತಿಥಿ ಗೃಹದಲ್ಲಿ ಸೊಳ್ಳೆ ಮುತ್ತಿಕೊಂಡಿರುವುದರಿಂದ ಮಲಗಲು ಸಾಧ್ಯವಾಗದ ಕಾರಣ ಸಬ್ ಎಂಜಿನಿಯರ್ ಅವರನ್ನು ಅಮಾನತುಗೊಳಿಸಲಾಗಿದೆ. ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಅತಿಥಿಗೃಹವನ್ನು ನಿರ್ವಹಿಸುವಲ್ಲಿ ಅಧಿಕಾರಿ ವಿಫಲರಾಗಿದ್ದಾರೆ ಎಂಬ ಕಾರಣಕ್ಕೆ ಈ ಕ್ರಮ ಕೈಗೊಂಡಿದ್ದಾರೆ. ಸಿದ್ದಿ ಜಿಲ್ಲೆಯ ಸರ್ಕ್ಯೂಟ್ ಹೌಸ್‌ನ ಉಸ್ತುವಾರಿ ಪಿಡಬ್ಲ್ಯುಡಿ ಸಬ್ ಎಂಜಿನಿಯರ್ ಬಾಬು ಲಾಲ್ ಗುಪ್ತಾ ಅವರು ಅಮಾನತುಗೊಂಡ ಅಧಿಕಾರಿಯಾಗಿದ್ದಾರೆ.

ಮುಖ್ಯಮಂತ್ರಿ ನಿನ್ನೆ ಸಿದ್ದಿಯ ಅತಿಥಿಗೃಹವೊಂದರಲ್ಲಿ ತಂಗಿದ್ದರು. ಆದರೆ ಅಲ್ಲಿ ಸಾಕಷ್ಟು ಸ್ವಚ್ಛತೆ ಹಾಗೂ ಸೌಲಭ್ಯಗಳು ಇರಲಿಲ್ಲ. ಅಲ್ಲಿನ ಎಲ್ಲಾ ಕೊಠಡಿಗಳು ದುಸ್ಥಿತಿಯಲ್ಲಿತ್ತು. ಸಿದ್ದಿಯಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟ 52 ಜನರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಲು ಆಗಮಿಸಿದ್ದ ಮುಖ್ಯಮಂತ್ರಿ ಆ ರಾತ್ರಿ ಸಿದ್ಧಿಯ ಅತಿಥಿ ಗೃಹವೊಂದರಲ್ಲಿ ತಂಗಿದ್ದರು. ಅತಿಥಿಗೃಹದ ನಿರ್ವಹಣೆಗೆ ಇಲ್ಲಿ ಸಾಕಷ್ಟು ಗಮನ ಹರಿಸದಿರುವುದು ಮುಖ್ಯಮಂತ್ರಿಗಳ ಗಮನಕ್ಕೆ ಬಂದಿದೆ. ಮುಖ್ಯಮಂತ್ರಿಗಳು ತಂಗಿದ್ದ ಕೋಣೆಯಲ್ಲಿ ಸೊಳ್ಳೆಗಳು ತುಂಬಿದ್ದವು.

- Advertisement -

ಅತಿಥಿ ಗೃಹದ ನೀರಿನ ಟ್ಯಾಂಕ್ ಉಕ್ಕಿ ಹರಿದು ನೀರು ವ್ಯರ್ಥವಾಗುತ್ತಿರುವುದು ಕೂಡ ಮುಖ್ಯಮಂತ್ರಿಗಳ ಗಮನಕ್ಕೆ ಬಂದಿದೆ. ನಂತರ ಅವರು ಗೆಸ್ಟ್‌ಹೌಸ್ ಅಧಿಕಾರಿಗಳನ್ನು ತರಾಟಗೆ ತೆಗೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳುತ್ತಾರೆ. ಮುಖ್ಯಮಂತ್ರಿ ಆಗಮಿಸುತ್ತಾರೆ  ಎಂದು ತಿಳಿದಿದ್ದರೂ ಅಗತ್ಯ ವ್ಯವಸ್ಥೆಗಳನ್ನು ಮಾಡದ ಕಾರಣ ಅಮಾನತು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



Join Whatsapp