ವಿಶ್ವವಿದ್ಯಾಲಯ ಆಯೋಜಿಸಿದ್ದ ವೆಬಿನಾರ್ ವಿರುದ್ಧ ಪ್ರತಿಭಟಿಸಿದ ಎಬಿವಿಪಿ, ಆಯೋಜಕರಿಗೆ ಎಸ್ಪಿ ಎಚ್ಚರಿಕೆ!

Prasthutha|

ಮಧ್ಯಪ್ರದೇಶ: ಸಾಗರ ಮೂಲದ ಕೇಂದ್ರೀಯ ವಿಶ್ವವಿದ್ಯಾನಿಲಯದ ಮಾನವಶಾಸ್ತ್ರ ವಿಭಾಗದ ವತಿಯಿಂದ ಆಯೋಜಿಸಿದ್ದ ಅಂತರಾಷ್ಟ್ರೀಯ ವೆಬಿನಾರ್ ನಲ್ಲಿ ಧಾರ್ಮಿಕ ಮತ್ತು ಜಾತಿ ಭಾವನೆಗಳಿಗೆ ಧಕ್ಕೆಯಾಗುವ ಕುರಿತು ದೂರಿನ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯು ಉಪಕುಲಪತಿ ಅವರಿಗೆ ಪತ್ರ ಬರೆದು ಆಯೋಜಕರ ವಿರುದ್ಧ ಕಠಿಣ ಕ್ರಮ ಜರುಗಿಸುವ ಎಚ್ಚರಿಕೆ ನೀಡಿದ್ದಾರೆ. ಪೊಲೀಸರ ಎಚ್ಚರಿಕೆಯಿಂದಾಗಿ ಈ ಸೆಮಿನಾರ್ ಅನ್ನು ತಡೆಹಿಡಿಯಲಾಗಿದೆಯೆಂದು ಮಾನವಶಾಸ್ತ್ರ ವಿಭಾಗದ ಹರಿಸಿಂಗ್ ಗೌರ್ ಅವರು ತಿಳಿಸಿದ್ದಾರೆ.

- Advertisement -

ವಿಶ್ವವಿದ್ಯಾಲಯ ವತಿಯಿಂದ ಆಯೋಜಿಸುತ್ತಿರುವ ಈ ವೆಬಿನಾರ್ ನಲ್ಲಿ ಭಾಗವಹಿಸುವವರ ಹಿಂದಿನ ಹಿನ್ನೆಲೆ, ರಾಷ್ಟ್ರವಿರೋಧಿ ಮನಸ್ಥಿತಿ ಮತ್ತು ಜಾತಿ ಸಂಬಂಧಿತ ಹೇಳಿಕೆಗಳ ಉಲ್ಲೇಖವಿದೆಯೆಂಬ ಮಾಹಿತಿ ಆಧರಿಸಿ ಸಾಗರ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಅತುಲ್ ಸಿಂಗ್ ಅವರು ಗುರುವಾರ ಉಪಕುಲಪತಿಗೆ ಪತ್ರವೊಂದನ್ನು ಬರೆದಿದ್ದಾರೆ. ಮಾತ್ರವಲ್ಲದೇ ವೆಬಿನಾರ್ ನಲ್ಲಿ ಚರ್ಚಿಸಬೇಕಾದ ವಿಷಯ ಮತ್ತು ವಿಚಾರಗಳನ್ನು ಕಾರ್ಯಕ್ರಮಕ್ಕೆ ಮೊದಲು ಬಹಿರಂಗಪಡಿಸುವಂತೆ ಸೂಚಿಸಿದ್ದಾರೆ.

ಈ ಸೂಚನೆ ಪಾಲಿಸದಿದ್ದಲ್ಲಿ ಭಾರತೀಯ ದಂಡಸಂಹಿತೆ 505 ರ ಅನ್ವಯ ಕಾನೂನು ಕ್ರಮ ಜರುಗಿಸಲಾಗುವುದೆಂದು ಜಿಲ್ಲಾ ಎಸ್ಪಿ ಎಚ್ಚರಿಸಿದ್ದಾರೆ.

- Advertisement -

ವಿಶ್ವವಿದ್ಯಾಲಯದ ಮಾನವಶಾಸ್ತ್ರ ವಿಭಾಗವು ಜುಲೈ 30 ಮತ್ತು 31 ರಂದು ಆಯೋಜಿಸಿದ್ದ ವೆಬಿನಾರ್ ನಲ್ಲಿ “ವೈಜ್ಞಾನಿಕ ಸಾಧನೆಯಲ್ಲಿ ಸಂಸ್ಕೃತಿ ಮತ್ತು ಭಾಷಿಕ ಅಡಚಣೆಗಳು”ಎಂಬ ವಿಷಯದ ಕುರಿತು ಮಾತನಾಡಿದ ಗೌಹರ್ ರಝಾ, ಅಪೂರ್ವಾನಂದ್, ಹರ್ಜೀಂದರ್ ಸಿಂಗ್ ಸೇರಿದ ಗಣ್ಯರು ವೆಬಿನಾರ್ ನಲ್ಲಿ ಭಾಗವಹಿಸಿದ್ದರು. ಅಮೆರಿಕದ ಮಾಂಟ್‌ಕ್ಲೇರ್ ವಿಶ್ವವಿದ್ಯಾಲಯ ಆತಿಥ್ಯ ದೊಂದಿಗೆ ಈ ಕಾರ್ಯಕ್ರಮ ನಡೆಸಲಾಗಿತ್ತು. ಈ ಕಾರ್ಯಕ್ರಮದ ಸಂಚಾಲಕರಾದ ಡಾ. ಹರಿಸಿಂಗ್ ಅವರ ಅನುಪಸ್ಥಿತಿಯಲ್ಲಿ ಶುಕ್ರವಾರ ನಿಗದಿಯಂತೆ ಈ ಕಾರ್ಯಕ್ರಮ ಮುಂದುವರಿಯಿತು.

ಕಾರ್ಯಕ್ರಮದಲ್ಲಿ ಕೇಂದ್ರ ಶಿಕ್ಷಣ ಸಚಿವಾಲಯ ಭಾಗವಹಿಸುವಂತೆ ವಿಶ್ವವಿದ್ಯಾಲಯ ಕುಲಪತಿ ಪತ್ರ ಬರೆದಿದ್ದಾರೆ.

ಈ ಕಾರ್ಯಕ್ರಮಕ್ಕೆ ಕೇಂದ್ರ ಶಿಕ್ಷಣ ಸಚಿವಾಲದಿಂದ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಪ್ರೊಫೆಸರ್ ಗೌತಮ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಿಂದ ದೂರ ಉಳಿದಿದ್ದಾರೆ. ಈ ಕುರಿತು ಮಾಹಿತಿ ಪಡೆಯಲು ಉಪಕುಲಪತಿಯಾದ ಜೆಡಿ ಅಹಿ ಯವರನ್ನು ಸಂಪರ್ಕಿಸಿದಾಗ ಅವರು ಯಾವುದೇ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ.

ಜುಲೈ 22 ರಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ವೆಬಿನಾರ್ ನಲ್ಲಿ ಭಾಗವಹಿಸುವ ಸ್ಪೀಕರ್ ಗಳ ವಿರುದ್ಧ ಆಕ್ಷೇಪಿಸಿ ಪೊಲೀಸರಿಗೆ ಜ್ಞಾಪನಾ ಪತ್ರವನ್ನು ಸಲ್ಲಿಸಿತು. ದೆಹಲಿ ಗಲಭೆಯಲ್ಲಿ ಗೌಹರ್ ರಝಾ ಮತ್ತು ಅಪೂರ್ವಾನಂದ ಅವರ ಪಾತ್ರವಿದೆ ಮತ್ತು ರಾಷ್ಟ್ರವಿರೋಧಿ ನಿಲುವು ಹೊಂದಿದ್ದಾರೆ ಎಂದು ಎಬಿವಿಪಿ ಆರೋಪಿಸಿತ್ತು. ಈ ಆರೋಪದ ಕುರಿತು ಸುದ್ದಿಗಾರರು ಪ್ರಶ್ನಿಸಿದಾಗ ಇದು ನಮ್ಮ ವಿರುದ್ಧದ ಅಪಪ್ರಚಾರವಾಗಿದೆ. ಅದೇ ರೀತಿ ಪೊಲೀಸರು ದೌರ್ಜನ್ಯವೆಸಗುತ್ತಿರುವ ಎಬಿವಿಪಿ ಯನ್ನು ಹದ್ದುಬಸ್ತಿನಲ್ಲಿಡುವ ಬದಲು ನಮ್ಮನ್ನು ಗುರಿಪಡಿಸುತ್ತಿದೆಯೆಂದು ಅವರು ದೂರಿದರು. ಈ ಎಲ್ಲಾ ಹಿನ್ನೆಲೆಯಲ್ಲಿ ಈ ವೆಬಿನಾರ್ ನಿಂದ ಹಲವು ಗಣ್ಯರು ಹೊರಗುಳಿದಿದ್ದರು.

Join Whatsapp