ಮಧ್ಯಪ್ರದೇಶ: ಲಿವ್ ಇನ್ ಗೆಳತಿ ಕೊಂದು ಶವವನ್ನು 8 ತಿಂಗಳು ಫ್ರಿಡ್ಜ್’ನಲ್ಲಿಟ್ಟಿದ್ದ ಸಂಜಯ್..!

Prasthutha|

►ಸೀರೆಯುಟ್ಟು, ಆಭರಣ ಧರಿಸಿದ ಸ್ಥಿತಿಯಲ್ಲಿ ಮೃತದೇಹ ಪತ್ತೆ

- Advertisement -


ಭೋಪಾಲ್: ವಿವಾಹಿತನೊಬ್ಬ ಲಿವ್-ಇನ್ ಗೆಳತಿಯನ್ನು ಕೊಂದು ಸುಮಾರು 8 ತಿಂಗಳ ಕಾಲ ಶವವನ್ನು ಫ್ರಿಡ್ಜ್ ನಲ್ಲಿಟ್ಟಿದ್ದ ಘಟನೆ ಮಧ್ಯಪ್ರದೇಶದ ದೇವಾಸ್ ನಲ್ಲಿ ನಡೆದಿದೆ.


ಆರೋಪಿಯನ್ನು ಸಂಜಯ್ ಪಾಟಿದಾರ್ ಹಾಗೂ ಕೊಲೆಯಾದ ಲಿವ್ ಇನ್ ಗೆಳತಿಯನ್ನ ಪಿಂಕಿ ಪ್ರಜಾಪತಿ ಎಂದು ಗುರುತಿಸಲಾಗಿದೆ.

- Advertisement -


ಪಾಟಿದಾರ್ ಬಾಡಿಗೆಗೆ ಪಡೆದಿದ್ದ ಮನೆಯ ಫ್ರಿಡ್ಜ್ ನಲ್ಲಿ ಆಭರಣ ಧರಿಸಿ, ಸೀರೆಯುಟ್ಟ ಮಹಿಳೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಳೆದ ಜೂನ್ ತಿಂಗಳಲ್ಲೇ ಕೊಲೆ ಮಾಡಿರುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಉಜ್ಜಯಿನಿ ನಿವಾಸಿಯಾಗಿದ್ದ ಪಾಟಿದಾರ್ ಕಳೆದ 5 ವರ್ಷಗಳಿಂದ ಪಿಂಕಿಯೊಂದಿಗೆ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ದ. ಈ ವೇಳೆ ಇಬ್ಬರ ನಡುವೆ ದೈಹಿಕ ಸಂಪರ್ಕವೂ ಬೆಳೆದಿತ್ತು. ಇದರಿಂದ ಪಿಂಕಿ ಪದೇ ಪದೇ ತನ್ನನ್ನು ಮದುವೆಯಾಗುವಂತೆ ಪಾಟಿದಾರ್ ಗೆ ಒತ್ತಡ ಹೇರುತ್ತಿದ್ದಳು. ಇದರಿಂದ ಸಿಟ್ಟಿಗೆದ್ದ ಸಂಜಯ್ ತನ್ನ ಸ್ನೇಹಿತನೊಂದಿಗೆ ಸೇರಿ ಪಿಂಕಿ ಕೊಲ್ಲಲ್ಲು ಸ್ಕೆಚ್ ಹಾಕಿದ್ದ ಎಂದು ಮೂಲಗಳು ತಿಳಿಸಿವೆ

ಪತ್ತೆಯಾಗಿದ್ದು ಹೇಗೆ?
ಸುಮಾರು 30 ವರ್ಷದ ಪಿಂಕಿಯನ್ನು 2024ರ ಜೂನ್ ನಲ್ಲಿ ಹತ್ಯೆ ಮಾಡಿರುವುದಾಗಿ ಪೊಲೀಸರು ಶಂಕಿಸಿದ್ದಾರೆ. 2023ರಲ್ಲಿ ಸಂಜಯ್ ಧೀರೇಂದ್ರ ಶ್ರೀವಾಸ್ತವ ಎಂಬವರ ಮನೆ ಬಾಡಿಗೆ ಪಡೆದಿದ್ದ ಸಂಜಯ್ ಕಳೆದ ಜೂನ್ ತಿಂಗಳಲ್ಲಿ ಆಕೆಯನ್ನ ಕೊಲೆ ಮಾಡಿದ್ದಾನೆ. ಬಳಿಕ ಮನೆ ಖಾಲಿ ಮಾಡಿದ್ದಾನೆ. ಇದಾದ ಕೆಲ ದಿನಗಳ ನಂತರ ಶವ ಕೊಳೆತು ದುರ್ವಾಸನೆ ಬರಲಾರಂಭಿಸಿದೆ. ಈ ಬಗ್ಗೆ ಸ್ಥಳೀಯರು ಮನೆ ಮಾಲೀಕರಿಗೆ ತಿಳಿಸಿದ್ದಾರೆ. ಬಾಗಿಲು ತೆರೆದು ನೋಡಿದಾಗ ಫ್ರಿಡ್ಜ್ ನಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಕೂಡಲೇ ಮನೆ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ದೇವಾಸ್ ಪೊಲೀಸ್ ವರಿಷ್ಠಾಧಿಕಾರಿ ಪುನೀತ್ ಗೆಹ್ಲೋಟ್ ತಿಳಿಸಿದ್ದಾರೆ.



Join Whatsapp