ತನ್ನೊಂದಿಗೆ ಸೆಲ್ಫಿ ತೆಗೆದುಕೊಳ್ಳಬೇಕಾದರೆ 100 ರೂ ಪಾವತಿಸಬೇಕು ಎಂದ ಮಧ್ಯಪ್ರದೇಶ ಸಚಿವೆ!

Prasthutha|

ಭೋಪಾಲ್: ತನ್ನೊಂದಿಗೆ ಸೆಲ್ಫಿ ತೆಗೆದುಕೊಳ್ಳುವವರು ಬಿಜೆಪಿ ಫಂಡ್ ಗೆ 100 ರೂ ಪಾವತಿಸಬೇಕು ಎಂದು ಮಧ್ಯಪ್ರದೇಶದ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವೆ ಉಷಾ ಠಾಕೂರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

- Advertisement -

ಭೋಪಾಲ್‌ನಿಂದ 250 ಕಿ.ಮೀ ದೂರದಲ್ಲಿರುವ ಖಾಂಡ್ವಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ತೆರಳಿದ ವೇಳೆ  ಸೆಲ್ಫಿ ತೆಗೆದುಕೊಳ್ಳಲು ತನ್ನ ಸುತ್ತ ಜಮಾಯಿಸಿದ ಜನರ ಬಳಿ ಸಚಿವೆ ಈ ರೀತಿ ಹೇಳಿಕೆ ನೀಡಿದ್ದಾರೆ.

“ಸೆಲ್ಫಿಗಳಿಗಾಗಿ ಸಾಕಷ್ಟು ಸಮಯ ವ್ಯರ್ಥವಾಗುತ್ತದೆ. ಆದ್ದರಿಂದ ನನ್ನ ಕಾರ್ಯಕ್ರಮಗಳು ಗಂಟೆಗಟ್ಟಲೆ ವಿಳಂಬವಾಗುತ್ತವೆ. ಇನ್ನು ಮುಂದೆ ನನ್ನೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಬಯಸುವವರು ಬಿಜೆಪಿ ಫಂಡ್ ಗೆ 100 ರೂ ಪಾವತಿಸಬೇಕು” ಎಂದು ಅವರು ಹೇಳಿದ್ದಾರೆ.

- Advertisement -

ತನ್ನನ್ನು ಸ್ವಾಗತಿಸಲು ಪುಷ್ಪಗುಚ್ಛಗಳನ್ನು ನೀಡುವುದರ ಬದಲಿಗೆ ಪುಸ್ತಕಗಳನ್ನು ನೀಡಿರಿ ಎಂದು ಉಷಾ ಈ ವೇಳೆ ಹೇಳಿದ್ದಾರೆ. ಹೂವುಗಳು ಲಕ್ಷ್ಮಿ ದೇವಿಯ ವಾಸ ಸ್ಥಳವಾಗಿದೆ. ಆದ್ದರಿಂದ ವಿಷ್ಣು ಮಾತ್ರ ಹೂಗಳನ್ನು ಪಡೆಯಲು ಅರ್ಹನು ಎಂದು ಅವರು ವಿವರಿಸಿದ್ದಾರೆ.

ಹಿಂದೆಯೂ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗಿದ್ದ 55 ವರ್ಷದ ಉಷಾ, ಕೋವಿಡ್ ಲಸಿಕೆ ತೆಗೆದುಕೊಳ್ಳುವವರು ಪ್ರತಿ ಡೋಸ್‌ಗೆ 250 ರೂ.ಗಳನ್ನು ಪಿಎಂ ಕೇರ್ಸ್ ಫಂಡ್‌ಗೆ ನೀಡಬೇಕು ಎಂದು ಹೇಳಿದ್ದರು.



Join Whatsapp