ಭೋಪಾಲ್: ಮಧ್ಯಪ್ರದೇಶದ ಪಟಾಕಿ ಸಂಭವಿಸಿದ ಸ್ಫೋಟದಲ್ಲಿ ಸಾವಿನ ಸಂಖ್ಯೆ 11ಕ್ಕೇರಿದೆ. 60 ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಮಧ್ಯಪ್ರದೇಶದ ಹರ್ದಾದಲ್ಲಿ ಈ ಘಟನೆ ನಡೆದಿದೆ. ಕೆಲವರ ಸ್ಥಿತಿ ಗಂಭೀರವಾಗಿದೆ. ಪಟಾಕಿ ಘಟಕದಲ್ಲಿ ಏಳು ಸ್ಪೋಟಗಳು ಸಂಭವಿಸಿ ಅಲ್ಲಿ ಕೆಲಸ ಮಾಡುತ್ತಿದ್ದವರು ಸುಟ್ಟು ಕರಕಲಾಗಿದ್ದಾರೆ. ಅಕ್ಕಪಕ್ಕದ ಪ್ರದೇಶಗಳಿಗೂ ಬೆಂಕಿ ಆವರಿಸಿತ್ತು.
ಹರ್ದಾ ಪಟ್ಟಣದ ಹೊರ ವಲಯದಲ್ಲಿ ಪಟಾಕಿ ಉತ್ಪಾದನೆ ಘಟಕದಲ್ಲಿ ಕೆಲ ದಿನಗಳಿಂದ ಚಟುವಟಿಕೆ ನಡೆದಿತ್ತು. ಬೇಡಿಕೆ ಹೆಚ್ಚಿದ್ದರಿಂದ ಹೆಚ್ಚಿನ ಸಿಬ್ಬಂದಿ ಇಲ್ಲಿ ಕೆಲಸ ನಡೆಸುತ್ತಿದ್ದರು. ಮಂಗಳವಾರ ಮಧ್ಯಾಹ್ನ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು. ಅದನ್ನು ಆರಿಸುವಷ್ಟರಲ್ಲಿ ಸ್ಪೋಟ ಸಂಭವಿಸಿದೆ. ಒಟ್ಟು ಏಳು ಬಾರಿ ಸ್ಪೋಟಗಳ ಒಳಗೆ ಸಂಭವಿಸಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಬೆಂಕಿ ಕೆನ್ನಾಗಲಗೆ ಜೋರಾಗಿದ್ದರಿಂದ ಅಲ್ಲಿದ್ದ ಆರು ಮಂದಿ ತೀವ್ರ ಸುಟ್ಟ ಗಾಯಗಳಿಂದ ಮೃತಪಟ್ಟಿದ್ದಾರೆ. ಇನ್ನೂ ಹಲವರು ಹೊರಗೆ ಓಡಿ ಬಂದಿದ್ದು, ಅವರಿಗೂ ಸುಟ್ಟು ಗಾಯಗಳಾಗಿವೆ. ಆನಂತರ ಐದು ಮಂದಿ ಮೃತಪಟ್ಟು ಒಟ್ಟು 11 ಮಂದಿ ಜೀವ ಕಳೆದುಕೊಂಡಿದ್ದಾರೆ.
ಸ್ಪೋಟದ ಪ್ರಮಾಣ ಹೇಗಿತ್ತೆಂದರೆ, ಪಕ್ಕದ ಮಾಲ್ವಾ ಪ್ರದೇಶಕ್ಕೂ ಇದು ಹಬ್ಬಿತ್ತು. ಪಕ್ಕದವರಿಗೆ ಸ್ಫೋಟದ ಸದ್ದು ಕೇಳಿಸಿದೆ.