ಆಸ್ಪತ್ರೆಯಿಂದ ಆಂಬ್ಯುಲೆನ್ಸ್ ನಿರಾಕರಣೆ: ಮಗಳ ಶವವನ್ನು ಮಡಿಲಿನಲ್ಲಿ ಮಲಗಿಸಿ ಬೈಕ್​ನಲ್ಲಿ ತೆರಳಿದ ತಂದೆ!

Prasthutha|

ಶಾಹದೋಲ್: ಆಸ್ಪತ್ರೆಯೊಂದು ಆಂಬ್ಯುಲೆನ್ಸ್ ನೀಡಲು ನಿರಾಕರಿಸಿದ್ದರಿಂದ ತಂದೆಯೊಬ್ಬರು ಮಗಳ ಶವವನ್ನು ತಮ್ಮ ಮಡಿಲಿನ ಮೇಲೆ ಮಲಗಿಸಿಕೊಂಡು ಬೈಕ್​ನಲ್ಲಿ 70 ಕಿ.ಮೀ ಸಂಚರಿಸಿರುವ ಹೃದಯ ವಿದ್ರಾವಕ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

- Advertisement -

ಮಧ್ಯಪ್ರದೇಶದ ಶಾಹದೋಲ್​ನ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಆಂಬ್ಯುಲೆನ್ಸ್ ನೀಡಲು ನಿರಾಕರಿಸಿದ್ದಾರೆ, ಬಳಿಕ ತಂದೆಯೊಬ್ಬರು 13 ವರ್ಷದ ಮಗಳ ಶವವನ್ನು ಬೈಕ್ ಸಹಾಯದಿಂದ ತೆಗೆದುಕೊಂಡು ಹೋಗಬೇಕಾಯಿತು. ಅವರಿಗೆ ಆಂಬ್ಯುಲೆನ್ಸ್ ಗೆ ಪಾವತಿಸಲು ಹಣವಿರಲಿಲ್ಲ.

ಶಾಹದೋಲ್‌ನಿಂದ 70 ಕಿಮೀ ದೂರದಲ್ಲಿರುವ ಕೋಟಾ ಗ್ರಾಮದ ನಿವಾಸಿ ಲಕ್ಷ್ಮಣ್ ಸಿಂಗ್ ಅವರ ಮಗಳು ಮಾಧುರಿ ಸೋಮವಾರ ರಾತ್ರಿ ಕಣ ರಕ್ತಹೀನತೆಯಿಂದ ಸಾವನ್ನಪ್ಪಿದ್ದಾರೆ. ಆಸ್ಪತ್ರೆಯ ಅಧಿಕಾರಿಗಳನ್ನು ವಾಹನಕ್ಕಾಗಿ ಕೇಳಿದಾಗ 15 ಕಿ.ಮೀಗಿಂತ ದೂರದ ಸ್ಥಳಗಳಿಗೆ ವಾಹನಗಳು ಲಭ್ಯವಿಲ್ಲ, ನೀವೇ ವ್ಯವಸ್ಥೆ ಮಾಡಿಕೊಳ್ಳಿ ಎಂದು ತಿಳಿಸಿದ್ದಾರೆ.

- Advertisement -

“ಆದರೆ ಹಣದ ಕೊರತೆಯಿಂದಾಗಿ ನಾವು ನಮ್ಮ ಮಗಳ ಮೃತ ದೇಹವನ್ನು ಮೋಟಾರ್ ಸೈಕಲ್​ನಲ್ಲಿ ತೆಗೆದುಕೊಂಡು ಹೋಗಬೇಕಾಯಿತು” ಎಂದು ಲಕ್ಷ್ಮಣ್ ಸಿಂಗ್ ತಿಳಿಸಿದ್ದಾರೆ.

“ಮನೆ 20 ಕಿ.ಮೀ ದೂರವಿರುವಾಗ ಶಾಹದೂಲ್ ಕಲೆಕ್ಟರ್ ವಂದನಾ ವೈದ್ಯ ಅವರು ವಾಹನದ ವ್ಯವಸ್ಥೆ ಮಾಡಿದರು, ಬಳಿಕ ಊರನ್ನು ತಲುಪಿದೆವು. ಶಹದೋಲ್ ಕಲೆಕ್ಟರ್ ಕುಟುಂಬಕ್ಕೆ ಸ್ವಲ್ಪ ಆರ್ಥಿಕ ಸಹಾಯವನ್ನು ಒದಗಿಸಿ ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ” ಎಂದು ಅವರು ಹೇಳಿದ್ದಾರೆ.

Join Whatsapp