‘ಲವ್ ಜಿಹಾದ್’ ವಿರುದ್ಧ ಕಾನೂನು ತರಲಾಗುವುದು: ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್

Prasthutha|

ಹೊಸದಿಲ್ಲಿ: ಅಗತ್ಯವಿದ್ದರೆ ತನ್ನ ಸರಕಾರ ಅಂತರ್ಜಾತಿ ವಿವಾಹಗಳನ್ನು ದಮನಿಸುವ ಕಾನೂನನ್ನು ಪಾಸು ಮಾಡಲಿದೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಹೇಳಿರುವುದಾಗಿ ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿದೆ.

- Advertisement -

“ಪ್ರೀತಿಯ ಹೆಸರಿನಲ್ಲಿ ಜಿಹಾದ್ ಇಲ್ಲ. ಯಾರಾದರೂ ಇಂತಹ ಆಚರಣೆಯಲ್ಲಿ ತೊಡಗಿದರೆ ಅವರಿಗೆ ಪಾಠ ಕಲಿಸಲಾಗುವುದು ಮತ್ತು ಅದಕ್ಕಾಗಿ ಕಾನೂನೊಂದನ್ನು ಜಾರಿಗೊಳಿಸಲಾಗುವುದು” ಎಂದು ವರದಿಗಾರರ ಜೊತೆ ಮಾತನಾಡಿದ ಚೌಹಾನ್ ಹೇಳಿದ್ದಾರೆ.

ಈ ರೀತಿಯ ಕಾನೂನಿನ ಕುರಿತು ಪ್ರಸ್ತಾಪಿಸಿದ ಭಾರತೀಯ ಜನತಾ ಪಕ್ಷ ಆಳುತ್ತಿರುವ ರಾಜ್ಯದ ಮೂರನೆ ಮುಖ್ಯಮಂತ್ರಿ ಚೌಹಾನ್ ಆಗಿದ್ದಾರೆ. ಕಳೆದ ವಾರ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ “ಗುರುತು ಮರೆಮಾಚುವಿಕೆ’ಯ ಆಧಾರದಲ್ಲಿ ಮಹಿಳೆಯರನ್ನು ಮದುವೆಯಾಗುವವರಿಗೆ ಸಾವಿನ ಬೆದರಿಕೆಯನ್ನು ಹಾಕಿದ್ದರು. ಅವರ ಹರಿಯಾಣ ಸಹೋದ್ಯೋಗಿ ಮನೋಹರ್ ಲಾಲ್ ಖಟ್ಟರ್ ರವಿವಾರದಂದು ‘ಲವ್ ಜಿಹಾದ್’ ದಮನಿಸಲು ಕಾನೂನೊಂದನ್ನು ಪರಿಚಯಿಸುವುದಾಗಿ ಹೇಳಿದ್ದರು.

- Advertisement -

ವಿವಾಹದ ಉದ್ದೇಶದಿಂದ ಆಗುವ ಧಾರ್ಮಿಕ ಮತಾಂತರದ ಕುರಿತು ಅಲಹಾಬಾದ್ ಹೈಕೋರ್ಟ್ ಮಾಡಿದ ಅವಲೋಕನವನ್ನು ಉಲ್ಲೇಖಿಸಿ ಆದಿತ್ಯನಾಥ್ ಹೊಸ ಕಾನೂನಿನ ಕುರಿತು ಮಾತನಾಡಿದ್ದರು. ಸೋಮವಾರದಂದು ಬಲ್ಲಾಬ್ ಘಡ್ ನ ಫರೀದಾಬಾದ್ ನಲ್ಲಿ ಕಾಲೇಜಿನ ಹೊರಗೆ ವ್ಯಕ್ತಿಯೋರ್ವ 21ರ ಹರೆಯದ ವಿದ್ಯಾರ್ಥಿನಿಯೊಬ್ಬಳನ್ನು ಗುಂಡಿಕ್ಕಿ ಹತ್ಯೆಮಾಡಿರುವುದನ್ನು ಉಲ್ಲೇಖಿಸಿ ಖಟ್ಟರ್ ಈ ಹೇಳಿಕೆಯನ್ನು ನೀಡಿದ್ದರು.

ಫೆಬ್ರವರಿ 4ರಂದು ಕೆಂದ್ರ ಗೃಹಸಚಿವಾಲಯವು ದೇಶದಲ್ಲಿರುವ ಪ್ರಸ್ತುತ ಕಾನೂನಿನಲ್ಲಿ ಅಂತಹ ಯಾವುದೇ ವಿಷಯವನ್ನು ವಿವರಿಸಲಾಗಿಲ್ಲವೆಂದು ಹೇಳಿರುವ ಹೊರತಾಗಿಯೂ ‘ಲವ್ ಜಿಹಾದ್’ ಕಾನೂನಿನ ಕುರಿತು ಬಿಜೆಪಿಯ ಮೂವರು ಮುಖ್ಯಮಂತ್ರಿಗಳು ಪ್ರಸ್ತಾಪಿಸಿದ್ದಾರೆ.

Join Whatsapp