ಮಾದಕ ವಸ್ತು ವಿರುದ್ಧ ಅಭಿಯಾನ| ತಿರುವನಂತಪುರಕ್ಕೆ ಕಾಲ್ನಡಿಗೆ ಯಾತ್ರೆ ಹೊರಟ ಮಂಜೇಶ್ವರ ನಿವಾಸಿ

Prasthutha|

ಕಾಸರಗೋಡು: ಮಾದಕ ವಸ್ತು ಬಳಕೆ ವಿರುದ್ಧ ಹಾಗೂ ವಿಭಿನ್ನ ಸ೦ದೇಶಗಳೊಂದಿಗೆ ಕೇರಳದ ರಾಜಧಾನಿ ತಿರುವನಂತಪುರಕ್ಕೆ ಮಂಜೇಶ್ವರ ನಿವಾಸಿಯಾದ ಆಬ್ದುಲ್ ಹಮೀದ್ ಕಾಲ್ನಡಿಗೆ ಯಾತ್ರೆ ಆರಂಭಿಸಿದ್ದಾರೆ.

ಮಾದಕ ವ್ಯಸನಕ್ಕೆ ವಿದಾಯ ಹೇಳಿ, ಆತ್ಮಹತ್ಯೆ ಯಾವುದಕ್ಕೂ ಪರಿಹಾರವಲ್ಲ. ಪ್ರತಿ ಹನಿ ನೀರನ್ನು ಉಳಿಸಿ, ಆಹಾರವನ್ನು ವ್ಯರ್ಥ ಮಾಡಬೇಡಿ, ಸ್ವಚ್ಛತೆ ಕಾಪಾಡಿ ಎಂಬ ಮೊದಲಾದ ಸ೦ದೇಶಗಳೊಂದಿಗೆ ಹಮೀದ್‌ ಮಂಜೇಶ್ವರದಿಂದ ಕಾಲ್ನಡಿಗೆ ಯಾತ್ರೆ ಆರಂಭಿಸಿದ್ದಾರೆ.

- Advertisement -

ಕರ್ನಾಟಕ- ಕೇರಳ ಗಡಿ ಪ್ರದೇಶವಾದ ಮಂಜೇಶ್ವರದಿಂದ ತಿರುವನಂತಪುರಕ್ಕೆ ಕಾಲ್ನಡಿಗೆ ಯಾತ್ರೆ ಹೊರಟ ಹಮೀದ್‌ ಅವರಿಗೆ ನಾಡಿನ ವಿವಿಧ ಸಂಘಟನೆಯ ನೇತಾರರು, ಸಾಮಾಜಿಕ ಕಾರ್ಯಕರ್ತರು ಹಾಗೂ ರಾಜಕೀಯ ಮುಂದಾಳುಗಳು ಶುಭ ಹಾರೈಸಿದರು.

- Advertisement -