ಗಿರಿಜನ ಹಾಡಿಯಲ್ಲಿ ವಾಸ್ತವ್ಯ ಹೂಡಿದ ಎಂ.ಪಿ.ಕುಮಾರಸ್ವಾಮಿ

Prasthutha|

►ಮೂಲಭೂತ ಸೌಕರ್ಯಗಳಿಗೆ ಒಂದು ಕೋಟಿ ರೂಪಾಯಿ ಅನುದಾನ ಬಿಡುಗಡೆ ಭರವಸೆ

- Advertisement -

ಅನುಸೂಚಿತ ಜಾತಿ,ಪಂಗಡ ಕಲ್ಯಾಣ ಸಮಿತಿ ಅಧ್ಯಕ್ಷ ಎಂ.ಪಿ.ಕುಮಾರ ಸ್ವಾಮಿ ಚಿಕ್ಕಮಗಳೂರು ತಾಲೂಕಿನ ಸತ್ತಿಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಗಿರಿಜನ ಹಾಡಿಗೆ ಬೇಟಿ ನೀಡಿ ಇಡೀ ದಿವಸ ಅವರ ಜತೆ ಕಾಲ‌ ಕಳೆದು ಕುಂದುಕೊರತೆಗಳನ್ನು ಆಲಿಸಿದರು.

ಹಾಡಿ ಗಿರಿಜನರ ಜತೆಯಲ್ಲಿ ಗಂಜಿ ಸೇವಿಸಿ ಇಡೀ ದಿವಸ ಅವರ ಜತೆ ಕಾಲ ಕಳೆದು ದೈರ್ಯ ತುಂಬಿದರು.

- Advertisement -

ಸತ್ತಿಹಳ್ಳಿ ಗ್ರಾಮ ಪಂಚಾಯತಿ ಈ ಗಿರಿಜನ ಹಾಡಿ ಇದುವರೆಗೂ ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೇ ಸೊರಗಿ ಹೋಗಿದೆ. ಅಲ್ಲಿನ ಎಲ್ಲ ಗಿರಿಜನರು ಸರಿಯಾದ ಸೂರುಗಳಿಲ್ಲದೆ ಕಾಲಕಳೆಯುವ ಪರಿಸ್ಥಿತಿ ಬಂದೊದಗಿದೆ. ಈ ಹಿನ್ನಲೆಯಲ್ಲಿ ಸಮಿತಿ ಅಧ್ಯಕ್ಷ  ಎಂ.ಪಿ.ಕುಮಾರಸ್ವಾಮಿ ಬೇಟಿ ನೀಡಿ ಅಗತ್ಯ ಮೂಲಭೂತ ಸೌಕರ್ಯಗಳಿಗಾಗಿ ರಾಜ್ಯ ಸರ್ಕಾರದಿಂದ ಒಂದು ಕೋಟಿ ರೂಪಾಯಿ ಅನುದಾನ ಕೊಡಿಸುವುದಾಗಿ ಭರವಸೆ ನೀಡಿದರು.



Join Whatsapp