ಬೆಂಗಳೂರು: ನಗರದ ಲುಲು ಮಾಲ್ನಲ್ಲಿ ಯುವತಿಯ ಹಿಂಭಾಗ ಮುಟ್ಟಿ ವ್ಯಕ್ತಿಯೊಬ್ಬ ವಿಕೃತಿ ಮೆರೆದ ವೀಡಿಯೊ ವೈರಲ್ ಆಗಿದ್ದು, ಕಾಮುಕನ ಪತ್ತೆಗೆ ಜನಾಗ್ರಹ ವ್ಯಕ್ತವಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ಕೂಡ ದಾಖಲಾಗಿತ್ತು. ಕೊನೆಗೂ ವೀಡಿಯೊ ದೃಶ್ಯ ಆಧರಿಸಿ ಕಾಮುಕನ ಗುರುತನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ವೀಡಿಯೋದಲ್ಲಿ ಇರುವಂತೆ ವಿಕೃತಿ ಮೆರೆದ ವ್ಯಕ್ತಿಯ ಹೆಸರು ಅಶ್ವಥ್ ನಾರಾಯಣ್. 60 ವಯಸ್ಸಿನ ಈತ ಬಸವೇಶ್ವರನಗರ ನಿವಾಸಿ. ಮೂರು ದಿನಗಳ ಹಿಂದೆ ಲುಲು ಮಾಲ್ ನಲ್ಲಿ ಯವತಿಯರ ಜೊತೆ ಅಸಭ್ಯವಾಗಿ ಅಶ್ವಥ್ ನಾರಾಯಣ್ ವರ್ತಿಸಿದ ಬಳಿಕ ವೀಡಿಯೋ ವೈರಲ್ ಆಗಿರೋದು ತಿಳಿದು ಮನೆಗೆ ಬೀಗ ಹಾಕಿ ಪಲಾಯನ ಮಾಡಿದ್ದಾನೆ.
ಅಶ್ವಥ್ ನಾರಾಯಣ್ ಪ್ರತಿಷ್ಠಿತ ಮಠಕ್ಕೆ ಸೇರಿದ ಶಾಲೆಯಲ್ಲಿ ಮುಖ್ಯ ಶಿಕ್ಷಕನಾಗಿ ನಿವೃತ್ತನಾಗಿದ್ದ. ಕಳೆದ ಎಂಟು ತಿಂಗಳ ಹಿಂದೆ ಅಶ್ವಥ್ ನಾರಾಯಣ್ ನಿವೃತ್ತನಾಗಿದ್ದ. ಸದ್ಯ ಮನೆಗೆ ಬೀಗ ಹಾಕಿಕೊಂಡು ಎಸ್ಕೇಪ್ ಆಗಿದ್ದು, ಆತನ ಪತ್ತೆಗೆ ಮಾಗಡಿ ರೋಡ್ ಪೊಲೀಸರು ಬಲೆಬೀಸಿದ್ದಾರೆ.
ಅಕ್ಟೋಬರ್ 29ರಂದು ಸಂಜೆ ಆರುವರೆ ಸುಮಾರಿಗೆ ಮಾಲ್‌ನ ಎರಡನೇ ಮಹಡಿಯ ಫಂಚುರ್ ಗೇಮ್ ಫ್ಲೋರ್‌ನಲ್ಲಿ ವ್ಯಕ್ತಿಯೋರ್ವ ಯುವತಿ ಹಿಂಭಾಗಕ್ಕೆ ಡಿಕ್ಕಿ ಹೊಡೆದು ಆಕೆಯ ಹಿಂಭಾಗವನ್ನು ಅಶ್ಲೀಲವಾಗಿ ಮುಟ್ಟಿದ್ದಾನೆ. ಬಳಿಕ ತನಗೇನೂ ತಿಳಿದಿಲ್ಲ ಎಂಬಂತೆ ಆಲ್ಲಿಂದ ಪರಾರಿಯಾಗಿದ್ದಾನೆ. ಈ ವಿಡಿಯೋ ಗ್ರಾಹಕರೊಬ್ಬರ ಮೊಬೈಲ್ನಲ್ಲಿ ಸೆರೆಯಾಗಿ ವೈರಲ್ ಆಗಿತ್ತು.