ಕಿವುಡರ ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ಲೂದಿಯಾನ ಹುಡುಗಿ

Prasthutha|

ಲುಧಿಯಾನ: ಬ್ರೆಜಿಲ್ ನಲ್ಲಿ ನಡೆಯುತ್ತಿರುವ ಕಿವುಡರ ಒಲಿಂಪಿಕ್ಸ್ ನಲ್ಲಿ ಬ್ಯಾಡ್ಮಿಂಟನ್ ನಲ್ಲಿ ಭಾರತ ಮೂಲದ ಶ್ರೇಯಾ ಸಿಂಗ್ಲಾ  ಚಿನ್ನದ ಪದಕವನ್ನು ಗೆದ್ದಿದ್ದಾರೆ.

- Advertisement -

ಬಟಿಂಡಾ ಮೂಲದ 17 ನೇ ವಯಸ್ಸಿನ ಶ್ರೇಯಾ ಪ್ರಸ್ತುತ ಭಾರತ ತಂಡದಲ್ಲಿರುವ ಪಂಜಾಬ್ ನ ಏಕೈಕ ವಿಕಲಚೇತನ ಆಟಗಾರ್ತಿಯಾಗಿದ್ದು, ಫೈನಲ್ ನಲ್ಲಿ ಜಪಾನ್ ತಂಡವನ್ನು ಎದುರಿಸಿ ಗೆಲುವು ಸಾಧಿಸಿದ್ದಾರೆ.

ಶ್ರೇಯಾ ಡೆಫ್ಲಿಂಪಿಕ್ಸ್ ಗೆ ಆಯ್ಕೆಯಾದ ಭಾರತದ ನಾಲ್ವರು ಮಹಿಳಾ ಆಟಗಾರರಲ್ಲಿ  ಒಬ್ಬರಾಗಿದ್ದು, ಉಳಿದ ಮೂವರು ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ತಮಿಳುನಾಡು ಮೂಲದವರಾಗಿದ್ದಾರೆ.



Join Whatsapp