ಲುಧಿಯಾನಾ ಕೋರ್ಟ್ ಸ್ಫೋಟ ಪ್ರಕರಣ: ಪ್ರಮುಖ ಆರೋಪಿ ಹರ್ ಪ್ರೀತ್ ಸಿಂಗ್ ಬಂಧನ

Prasthutha|

ಚಂಡೀಗಢ: ಪಂಜಾಬ್ ನ ಲುಧಿಯಾನ ನ್ಯಾಯಾಲಯದಲ್ಲಿ ಡಿಸೆಂಬರ್ 23, 2021ರಂದು ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಪ್ರಮುಖ ಆರೋಪಿ ಹಾಗೂ ಉಗ್ರ ಹರ್ ಪ್ರೀತ್ ಸಿಂಗ್ ನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐಎ) ಅಧಿಕಾರಿಗಳು ಬಂಧಿಸಿದ್ದಾರೆ.

- Advertisement -

ಸ್ಫೋಟ ಘಟನೆ ಬಳಿಕ ತಲೆ ಮರೆಸಿಕೊಂಡಿದ್ದ ಪಂಜಾಬ್ ನ ಅಮೃತಸರ ಜಿಲ್ಲೆಯವನಾದ ಹರ್ಪ್ರೀತ್ ಸಿಂಗ್ ಅಲಿಯಾಸ್ ಹ್ಯಾಪಿ ಮಲೇಷ್ಯಾನನ್ನು ಮಲೇಷ್ಯಾದ ಕೌಲಾಲಂಪುರದಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆಯೇ ಬಂಧಿಸಲಾಗಿದೆ.

ಹರ್ಪ್ರೀತ್ ಸಿಂಗ್, ಐಎಸ್ ವೈಎಫ್(ಅಂತರರಾಷ್ಟ್ರೀಯ ಸಿಖ್ ಯುವಕರ ಒಕ್ಕೂಟ) ಸಂಘಟನೆಯ ಪಾಕ್ ಮೂಲದ ಸ್ವಯಂ ಘೋಷಿತ ಮುಖ್ಯಸ್ಥ ಲಖ್ಬೀರ್ ಸಿಂಗ್ ರೋಡ್ ನ ಸಹವರ್ತಿಯಾಗಿದ್ದು, ರೋಡ್ ಜೊತೆಗೆ ಲುಧಿಯಾನ ಕೋರ್ಟ್ ಸ್ಫೋಟದ ಸಂಚುಕೋರರಲ್ಲಿ ಒಬ್ಬ ಎಂದು ತನಿಖೆಯಿಂದ ತಿಳಿದುಬಂದಿದೆ.

- Advertisement -

ಲಖ್ಬೀರ್ ಸಿಂಗ್ ಸೂಚನೆಯ ಮೇರೆಗೆ ಹರ್ಪ್ರೀತ್ ಸಿಂಗ್, ಲೂಧಿಯಾನ ಕೋರ್ಟ್ ಕಾಂಪ್ಲೆಕ್ಸ್ ಸ್ಫೋಟದಲ್ಲಿ ಬಳಸಲಾದ ಸುಧಾರಿತ ಸ್ಫೋಟಕವನ್ನು ಪಾಕಿಸ್ತಾನದಿಂದ ಭಾರತದಲ್ಲಿರುವ ತನ್ನ ಸಹಚರರಿಗೆ ಕಳುಹಿಸಿದ್ದ ಎಂದು ಎನ್‌ಐಎ ಹೇಳಿದೆ. ಈ ಸ್ಫೋಟದಲ್ಲಿ ಒಬ್ಬರು ಮೃತಪಟ್ಟು, ಐದು ಮಂದಿ ಗಾಯಗೊಂಡಿದ್ದರು.

ಬಂಧಿತ ಆರೋಪಿಯು ಸ್ಫೋಟಕ, ಶಸ್ತ್ರಾಸ್ತ್ರ ಮತ್ತು ಮಾದಕ ವಸ್ತುಗಳ ಕಳ್ಳಸಾಗಣೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ. ಆತನ  ವಿರುದ್ಧ ವಿಶೇಷ ಎನ್ ಐಎ ನ್ಯಾಯಾಲಯದಿಂದ ಎನ್ ಬಿಡಬ್ಲ್ಯೂ(ಜಾಮೀನು ರಹಿತ ಬಂಧನ ಆದೇಶ) ಹೊರಡಿಸಲಾಗಿದೆ.



Join Whatsapp