ಅಚ್ಚೇದಿನ್ | LPG ಸಿಲಿಂಡರ್ ಗೆ ಮತ್ತೆ 25 ರೂ. ಹೆಚ್ಚಳ..!

Prasthutha|

ಹೊಸದಿಲ್ಲಿ : ಲಾಕ್​ಡೌನ್​ನಿಂದ ತತ್ತರಿಸಿದ್ದ ಜನರು ಸುಧಾರಿಸಿಕೊಂಡು ಬರುತ್ತಿರುವ ಈ ಸಮಯದಲ್ಲಿ ಇಂಧನ ದರ ಏರಿಕೆ ಜತೆಗೆ ಎಲ್​ಪಿಜಿ ಸಿಲಿಂಡರ್​ ಬೆಲೆಯಲ್ಲಿ ಮತ್ತೆ 25ರೂ ಹೆಚ್ಚಳ ಮಾಡಿ ಕೇಂದ್ರ ಸರಕಾರವು ಜನಸಾಮಾನ್ಯರಿಗೆ ದೊಡ್ಡ ಹೊಡೆತ ನೀಡಿದೆ.

- Advertisement -

ಪೆಟ್ರೋಲ್​ ಮತ್ತು ಡೀಸೆಲ್​ ದರ ಏರಿಕೆಯ ಜೊತೆ ಎಲ್​ಪಿಜಿ​ ಸಿಲಿಂಡರ್ ಬೆಲೆ ಸೋಮವಾರ (ಮಾರ್ಚ್​ 1) ಕೂಡ 25 ರೂ. ಏರಿಕೆಯಾಗಿದೆ. ಮೂರು ದಿನಗಳ ಹಿಂದಷ್ಟೇ 25 ರೂ. ಏರಿಕೆಯಾಗಿತ್ತು. ಇದೀಗ ಮತ್ತೆ ಬೆಲೆ ಏರಿಕೆಯಾಗಿರುವುದು ಜನ ಸಾಮಾನ್ಯರ ಗಾಯದ ಮೇಲೆ ಬರೆ ಎಳೆದಂತಾಗಿದೆ.

14.2 ಕೆಜಿ ಅಡುಗೆ ಗ್ಯಾಸ್​ ಸಿಲಿಂಡರ್ ಬೆಲೆ ದೆಹಲಿಯಲ್ಲಿ 819 ರೂ. ತಲುಪಿದ್ದು, ನೂತನ ಬೆಲೆ ಮಾರ್ಚ್​ 1ರಿಂದಲೇ ಜಾರಿಗೆ ಬಂದಿದೆ.​

- Advertisement -

ಕಳೆದ ಫೆಬ್ರವರಿ 25ರಂದು ಅಡುಗೆ ಗ್ಯಾಸ್​ ಬೆಲೆಯಲ್ಲಿ 25 ರೂ. ಏರಿಕೆ ಕಂಡಿತ್ತು. ಇದಕ್ಕೂ ಮುನ್ನ ಫೆ. 4 ಮತ್ತು 14ರಲ್ಲಿ ಬೆಲೆ ಏರಿಕೆ ಮಾಡಲಾಗಿತ್ತು. ಕಳೆದ ವರ್ಷ ಡಿಸೆಂಬರ್​ನಲ್ಲಿ ಎರಡು ಬಾರಿ ಹೆಚ್ಚಳ ಮಾಡಲಾಗಿತ್ತು. ಡಿಸೆಂಬರ್​ 1ರಲ್ಲಿ 594 ರೂ. ಇದ್ದ ಸಿಲಿಂಡರ್​ ಬೆಲೆ 644ಕ್ಕೆ ಏರಿಕೆಯಾಗಿತ್ತು. ಬಳಿಕ ಡಿಸೆಂಬರ್ 15ರಲ್ಲಿ 694ಕ್ಕೆ ಏರಿಸುವುದರೊಂದಿಗೆ ಒಂದೇ ತಿಂಗಳಲ್ಲಿ 100 ರೂಪಾಯಿಗಳಷ್ಟು ಹೆಚ್ಚಳ ಮಾಡಲಾಗಿತ್ತು.

https://twitter.com/abhijeet_dipke/status/1366241499604676608

ಜನವರಿಯಲ್ಲಿ 694 ರೂ. ಇದ್ದ 14.2 ಕೆಜಿ ಸಿಲಿಂಡರ್​ ಬೆಲೆ ಫೆಬ್ರವರಿ 4ರಲ್ಲಿ 719ಕ್ಕೆ ಏರಿಸಲಾಯಿತು. ಕೇವಲ 10 ದಿನಗಳ ಅಂತರದಲ್ಲಿ ಸಿಲಿಂಡರ್​ ಬೆಲೆ 50 ರೂ. ಹೆಚ್ಚಳವಾಗಿದೆ. ಇದೀಗ ಮತ್ತೆ 25 ರೂ. ಏರಿಕೆಯಾಗಿರುವುದು ಜನಸಾಮಾನ್ಯರ ಜೇಬಿಗೆ ಮತ್ತಷ್ಟು ಹೊರೆಯಾಗಲಿದೆ. ಇಂಧನ ದರ ಏರಿಕೆಯಿಂದ ಈಗಾಗಲೇ ಅಗತ್ಯ ವಸ್ತುಗಳ ಬೆಲೆ ದ್ವಿಗುಣವಾಗಿದೆ. ಬೆಲೆ ಏರಿಕೆಗೆ ಕಡಿವಾಣ ಹಾಕುವ ಲಕ್ಷಣಗಳು ಗೋಚರಿಸದೇ ಇರುವುದರಿಂದ ದುನಿಯಾ ಇನ್ನಷ್ಟು ದುಬಾರಿಯಾಗಿವೆ ಎಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.



Join Whatsapp