ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಕೀಳ್ಮಟ್ಟದ ಟೀಕೆ : ಇದು ಬಿಜೆಪಿಯ ಮಹಿಳಾ ವಿರೋಧಿ ಸಂಕುಚಿತ ಮನೋಭಾವದ ಸಂಕೇತ : ವಿಮೆನ್ಸ್ ಫ್ರಂಟ್ ಖಂಡನೆ

Prasthutha|

ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಟೀಕಿಸುವ ಭರದಲ್ಲಿ ಇಡೀ ಸ್ತ್ರೀ ಕುಲವನ್ನು ಅವಮಾನಿಸುವಂತಹ ಹೇಳಿಕೆಯನ್ನು ನೀಡಿರುವ ಬಿಜೆಪಿ ಮಾಜಿ ಶಾಸಕ, ಬೆಳಗಾವಿ ಗ್ರಾಮಾಂತರ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಸಂಜಯ ಪಾಟೀಲರ ಮೇಲೆ ಕ್ರಮ ಜರುಗಿಸುವಂತೆ ಹಾಗೂ ಬಹಿರಂಗ ಕ್ಷಮೆ ಯಾಚಿಸುವಂತೆ ನ್ಯಾಷನಲ್ ವಿಮೆನ್ಸ್ ಫ್ರಂಟ್ ಆಗ್ರಹಿಸಿದೆ.

- Advertisement -


ಯಾವುದೇ ಪಕ್ಷದ ಮಹಿಳಾ ರಾಜಕಾರಣಿಯ ಬಗ್ಗೆ ಈ ರೀತಿಯ ಕೀಳುಮಟ್ಟದ ಮಾತುಗಳ ಬಳಕೆ ಸ್ತ್ರೀ ದ್ವೇಷದ ಪರಮಾವಧಿಯಾಗಿದೆ . ಇದು ಒಬ್ಬ ಮಹಿಳೆಯ ಸ್ಥಾನಮಾನ ಹಾಗೂ ಘನತೆಯನ್ನು ಕುಗ್ಗಿಸುವ ನೀಚ ಯತ್ನವಾಗಿದೆ. ಮಹಿಳಾ ನಾಯಕತ್ವವನ್ನು ಒಪ್ಪದ ಸಂಕುಚಿತ ಮನೋಭಾವ ಹೊಂದಿರುವವರ ಹತಾಶೆಯ ಮಾತುಗಳಾಗಿದೆ. ಪುರುಷ ಪ್ರಾಧಾನ್ಯತೆಯನ್ನು ಬಿಂಬಿಸುವ ಯತ್ನವಾಗಿದೆ. ಇದಕ್ಕೆ ಖಡಾಖಂಡಿತವಾಗಿ ನಾವು ವಿರೋಧ ವ್ಯಕ್ತಪಡಿಸುತ್ತೇವೆ. ಹಾಗಾಗಿ ಸಂಜಯ್ ಪಾಟೀಲರಲ್ಲದೆ ಪಕ್ಷದ ಕಾರ್ಯಕರ್ತರೂ ಸೇರಿದಂತೆ ಈ ಹೇಳಿಕೆಗೆ ಬಹಿರಂಗ ಕ್ಷಮೆ ಯಾಚಿಸಬೇಕು. ಅದೇ ರೀತಿ ಪಾಟೀಲ್ ರವರ ಮೇಲೆ ಪೊಲೀಸರು ಸ್ವಯಂಪ್ರೇರಿತ ಮೊಕದ್ದಮೆಯನ್ನು ದಾಖಲಿಸಬೇಕು ಎಂದು ನ್ಯಾಷನಲ್ ವಿಮೆನ್ಸ್ ಫ್ರಂಟ್ ರಾಜ್ಯಾಧ್ಯಕ್ಷೆ ಫರ್ಝನ ಮಹಮ್ಮದ್ ಒತ್ತಾಯಿಸಿದ್ದಾರೆ.

Join Whatsapp