ರಾಷ್ಟ್ರೀಯ ಮಹಿಳಾ ಬಾಕ್ಸಿಂಗ್| ಫೈನಲ್ ತಲುಪಿದ ಲವ್ಲಿನಾ, ನಿಖತ್

Prasthutha|

ಭೋಪಾಲ್: ವಿಶ್ವ ಚಾಂಪಿಯನ್ ನಿಖತ್ ಜರೀನ್ ಮತ್ತು ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕವಿಜೇತೆ ಲವ್ಲಿನಾ ಬೊರ್ಗೊಹೈನ್ ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಮಹಿಳಾ ಬಾಕ್ಸಿಂಗ್ ಚಾಂಪಿಯನ್ ಷಿಪ್ ನಲ್ಲಿ ಫೈನಲ್ ಪ್ರವೇಶಿಸಿದ್ದಾರೆ.

- Advertisement -

ರೈಲ್ವೆ ತಂಡದ ಒಟ್ಟು ಎಂಟು ಬಾಕ್ಸಿಂಗ್ ಪಟುಗಳು ವಿವಿಧ ವಿಭಾಗಗಳಲ್ಲಿ ಫೈನಲ್ ತಲುಪಿದ್ದಾರೆ. 2019ರ ವಿಶ್ವ ಬಾಕ್ಸಿಂಗ್ ಬೆಳ್ಳಿ ಪದಕ ಜಯಿಸಿದ್ದ ಮಂಜುರಾಣಿ (48.ಕೆ.ಜಿ), 2017ರ ವಿಶ್ವ ಯೂತ್ ಚಾಂಪಿಯನ್ ಜ್ಯೋತಿ ಗುಲಿಯಾ (52 ಕೆ.ಜಿ) ಈ ತಂಡದಲ್ಲಿದ್ದಾರೆ. ರೈಲ್ವೆಯ ಅನುಪಮ (50 ಕೆ.ಜಿ), ಶಿಕ್ಷಾ (54 ಕೆ.ಜಿ), ಪೂನಂ (60 ಕೆ.ಜಿ), ಶಶಿ (63 ಕೆ.ಜಿ), ಅನುಪಮಾ (81 ಕೆ.ಜಿ) ಹಾಗೂ ನೂಪುರ್ (81+ಕೆಜಿ) ಕೂಡ ಫೈನಲ್ ಪ್ರವೇಶಿಸಿದ್ದಾರೆ.

ತೆಲಂಗಾಣ ರಾಜ್ಯವನ್ನು ಪ್ರತಿನಿಧಿಸುತ್ತಿರುವ ನಿಖತ್ 50 ಕೆ.ಜಿ ವಿಭಾಗದ ಸೆಮಿಫೈನಲ್ ಬೌಟ್ನಲ್ಲಿ 5–0ಯಿಂದ ಎಐಪಿಯ ಶಿವೀಂದರ್ ಕೌರ್ ವಿರುದ್ಧ ಗೆದ್ದಿದ್ದು, ಫೈನಲ್ನಲ್ಲಿ ಅನಾಮಿಕಾ ಅವರನ್ನು ಎದುರಿಸಲಿದ್ದಾರೆ.

- Advertisement -

ಅಸ್ಸಾಂ ರಾಜ್ಯದ ಲವ್ಲಿನಾ 75 ಕೆ.ಜಿ. ವಿಭಾಗದಲ್ಲಿ ಮಧ್ಯ ಪ್ರದೇಶದ ಜಿಗ್ಯಾಸಾ ರಜಪೂತ್ ವಿರುದ್ಧ ಗೆದ್ದರು. ಚಿನ್ನದ ಪದಕದ ಸುತ್ತಿನಲ್ಲಿ ಅವರು ಎಸ್ಎಸ್ಸಿಬಿಯ ಅರುಂಧತಿ ಅವರನ್ನು ಎದುರಿಸಲಿದ್ದಾರೆ.

Join Whatsapp